ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೇನೆಯ ಪಾತ್ರ ಇತ್ತು ಎಂಬುದನ್ನು ಪಾಕಿಸ್ತಾನ ಸೇನೆ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದೆ.
ರಕ್ಷಣಾ ದಿನಚಾರಣೆ ವೇಳೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಂ ಮುನೀರ್ ಮಾತನಾಡುತ್ತಾ 1965, 1971 ಮತ್ತು 1999ರ (ಕಾರ್ಗಿಲ್) ಯುದ್ಧಗಳಲ್ಲಿ ನಾವು ಸಾವಿರಾರು ಯೋಧರನ್ನು ಕಳೆದುಕೊಂಡೆವು. ಸಾವಿರಾರು ಯೋಧರನ್ನು ದೇಶ ಮತ್ತು ಇಸ್ಲಾಂಗಾಗಿ ಹುತಾತ್ಮರಾಗಿದ್ದಾರೆ ಎಂದರು.
ಭಾರತ ವಿರುದ್ಧದ 1948 ಆಗಿರಲಿ, 1965, 1971, 1999ರ ಕಾರ್ಗಿಲ್ ಯುದ್ಧದಲ್ಲಿ ಸಾವಿರಾರು ಯೋಧರು ಕಳೆದುಕೊಂಡಿದ್ದೇವೆ. ಇವರೆಲ್ಲರೂ ಪಾಕಿಸ್ತಾನ ಮತ್ತು ಇಸ್ಲಾಂಗಾಗಿ ತ್ಯಾಗ ಮಾಡಿದ್ದಾರೆ ಎಂದು ಅವರು ಹೇಳಿದರು.
ಕಾರ್ಗಿಲ್ ಯುದ್ಧದಲ್ಲಿ ಸರ್ಕಾರದ ಪಾತ್ರವಿಲ್ಲ, ಮುಜಾಹಿದ್ದೀನ್ ಅಥವಾ ಸ್ವಾತಂತ್ರ್ಯ ಹೋರಾಟಗಾರರು ನಡೆಸಿದ್ದರು ಎಂದು ಪಾಕಿಸ್ತಾನ ಹೇಳಿಕೊಂಡು ಬರುತ್ತಿತ್ತು. ಆದರೆ ಭಾರತ ಯುದ್ಧದಲ್ಲಿ ಮೃತಪಟ್ಟ ಪಾಕಿಸ್ತಾನಿ ಸೈನಿಕರ ವಶ ನೀಡಿದರೂ ವಾಪಸ್ ಪಡೆಯಲು ನಿರಾಕರಿಸಿತ್ತು.
ಜಮ್ಮು ಕಾಶ್ಮೀರದ ಪರ್ವತಗಳ ಮೇಲೆ ಅಡಗಿ ದಾಳಿ ನಡೆಸಿದ್ದ ಪಾಕಿಸ್ತಾನ ಸೇನೆಯನ್ನು ಭಾರತ ಯಶಸ್ವಿಯಾಗಿ ಹಿಮ್ಮೆಟ್ಟಿಸಿ ಭರ್ಜರಿ ಜಯ ಸಾಧಿಸಿತ್ತು. ಆಗಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಕಾರ್ಗಿಲ್ ನಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವಂತೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಷ್ ಅವರಗೆ ಆಗ್ರಹಿಸಿದ್ದರು.