ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಾಣವತ್ ಗೆ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿದ ಮಹಿಳಾ ಪೇದೆಯನ್ನು ಹುದ್ದೆಯಿಂದ ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಕಾನ್ ಸ್ಟೇಬಲ್ ಕುಲ್ವಿಂದರ್ ಕೌರ್ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾ ರಾಣವತ್ ಗೆ ಕಪಾಳಕ್ಕೆ ಬಾರಿಸಿದ್ದರು.
ಕೇಂದ್ ಸರ್ಕಾರ 2020ರಲ್ಲಿ ಜಾರಿಗೆ ತಂದ 3 ಕೃಷಿ ಕಾನೂನುಗಳನ್ನು ಖಂಡಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ನನ್ನ ತಾಯಿ ಕೂಡ ಪಾಲ್ಗೊಂಡಿದ್ದರು. ಆದರೆ ಕಂಗನಾ ರೈತರು 100 ರೂ.ಗಾಗಿ ರಸ್ತೆಗೆ ಬಂದಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆಕೆ 100 ರೂ. ಕೊಟ್ಟರೆ ಬಂದು ಕೂರುತ್ತಾಳಾ. ನಾನು ರೈತರ ಪರ ಇದ್ದೇನೆ. ರೈತರ ಬಗ್ಗೆ ಮಾತನಾಡಿದರೆ ಇದೇ ರೀತಿ ಬುದ್ದಿ ಕಲಿಸಬೇಕು ಎಂದು ಕುಲ್ವಿಂದರ್ ಕೌರ್ ಹೇಳಿದ್ದರು.
ರೈತರು ಉಗ್ರರು. ಯಾರೂ ಇವರ ಪ್ರತಿಭಟನೆ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ ಅವರು ರೈತರು ಅಂತ. ಆದರೆ ಅವರು ರೈತರಲ್ಲ ಉಗ್ರರು. ದೇಶವನ್ನು ವಿಭಜನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಚೀನಾ ಭಾರತದ ಮೇಲೆ ದಾಳಿ ಮಾಡಲು ಸಹಾಯಕವಾಗಲಿ ಎಂದು ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಂಗನಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ನಂತರ ಡಿಲಿಟ್ ಮಾಡಿದ್ದರು.