ಇಸ್ರೇಲ್ ಮತ್ತು ಹೆಜಾಬುಲ್ಲಾ ನಡುವೆ ಭಾನುವಾರ ದಾಳಿ-ಪ್ರತಿದಾಳಿ ನಡೆದಿದ್ದು, ಭಾರೀ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ಆಗಿದೆ.
ಹೆಜಾಬುಲ್ಲಾ ಸುಮಾರು 250ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದ್ದು, ಈ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ ಇಸ್ರೇಲ್ ಲೆಬೆನಾನ್ ನ ಬೈರುತ್ ಮೇಲೆ ಪ್ರತಿದಾಳಿ ನಡೆಸಿದೆ ಎಂದು ವರದಿ ತಿಳಿಸಿದೆ.
ಕೆಲವು ತಿಂಗಳ ನಂತರ ನಡೆದ ಅತೀ ದೊಡ್ಡ ದಾಳಿ ಇದಾಗಿದ್ದು, ಎರಡೂ ದೇಶಗಳ ನಡುವಣ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದಾಳಿಯಲ್ಲಿ 7 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇದೇ ಮೊದಲ ಬಾರಿಗೆ ಹೆಜಾಬುಲ್ಲಾ ಇಷ್ಟು ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದೆ. ಡ್ರೋಣ್ ಸೇರಿದಂತೆ ವೈಮಾನಿಕ ದಾಳಿ ನಡೆಸಲಾಗಿದ್ದು, ಇಸ್ರೇಲ್ ಕೆಲವು ಕ್ಷಿಪಣಿಗಳನ್ನು ತಡೆದಿದೆ. ಆದರೆ ಹಲವಾರು ಕ್ಷಿಪಣಿಗಳು ಗುರಿ ತಲುಪಿದ್ದರಿಂದ ಹಲವಾರು ಕಟ್ಟಡಗಳು ಹಾನಿಗೊಳಗಾಗಿವೆ.