ವಿಶ್ವದ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರಿಗೆ ಸೋಲಿನ ಆಘಾತ ನೀಡಿದ ಯುವ ಆಟಗಾರ ಕಾರ್ಲೊಸ್ ಆಲ್ಕರೆಜ್ ವಿಂಬಲ್ಡನ್ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಕಾರ್ಲೊಸ್ ಅಲ್ಕರೆಜ್ 6-2, 6-2, 7-6 (7-4) ನೇರ ಸೆಟ್ ಗಳಿಂದ 7 ಬಾರಿಯ ಚಾಂಪಿಯನ್ ಜೊಕೊವಿಕ್ ಅವರನ್ನು ಸುಲಭವಾಗಿ ಸೋಲಿಸಿದರು.
ಹಾಲಿ ಚಾಂಪಿಯನ್ ಆಗಿರುವ ಪ್ರಶಸ್ತಿ ಉಳಿಸಿಕೊಳ್ಳುವ ಮೂಲಕ ಸ್ಪೇನ್ ನ ಕಾರ್ಲೊಸ್ ಗೆ ಒಟ್ಟಾರೆ 4ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಅದರಲ್ಲೂ 24 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ದಾಖಲೆ ಹೊಂದಿರುವ ಜೊಕೊವಿಕ್ ವಿರುದ್ಧದ ಗೆಲುವು ಐತಿಹಾಸಿಕ ಸಾಧನೆ ಆಗಿದೆ.