Monday, November 25, 2024
Google search engine
Homeತಾಜಾ ಸುದ್ದಿತಿರುಪತಿ ಪ್ರಸಾದದಲ್ಲಿ ಹುಳುಗಳು ಪತ್ತೆ: ಭಕ್ತರ ಆಕ್ರೋಶ

ತಿರುಪತಿ ಪ್ರಸಾದದಲ್ಲಿ ಹುಳುಗಳು ಪತ್ತೆ: ಭಕ್ತರ ಆಕ್ರೋಶ

ತಿರುಪತಿ ಲಡ್ಡುಗಳಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಮಿಶ್ರಣವಾಗಿದೆ ಎಂಬ ವಿವಾದದ ಬೆನ್ನಲ್ಲೇ ಇದೀಗ ತಿರುಪತಿಯಲ್ಲಿ ನೀಡಲಾಗುವ ಪ್ರಸಾದದಲ್ಲಿ ಹುಳುಗಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ತಿರುಪತಿ ಪ್ರಸಾದದ ಗುಣಮಟ್ಟದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದರೂ ಅದರ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಯಾವುದೇ ಗಂಭೀರ ಪ್ರಯತ್ನ ನಡೆದಿಲ್ಲ ಎಂದು ತಿರುಪತಿ ಭೋಜನದಲ್ಲಿ ಕಂಡು ಬಂದ ಹುಳುಗಳ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸರ್ಕಾರವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ನಾವು ಊಟ ಮಾಡುವಾಗ ಮಧ್ಯಾಹ್ನ 1.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಈ ಆರೋಪವನ್ನು ತಳ್ಳಿಹಾಕಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇವೆಂದು ಹೇಳಿದ್ದಾರೆ.

ನಾನು ವಾರಂಗಲ್​ನಿಂದ ತಿಮ್ಮಪ್ಪನ ದರ್ಶನಕ್ಕೆಂದು ತೆರಳಿದ್ದೆ, ಮೊಸರನ್ನ ಊಟದಲ್ಲಿ ಊಟದಲ್ಲಿ ಹುಳು ಸಿಕ್ಕಿದೆ. ಈ ವಿಚಾರವನ್ನು ಸಿಬ್ಬಂದಿಗೆ ತಿಳಿಸಿದರೆ, ಸರ್ಕಾರ ಬದಲಾದರೂ ಈ ಸಮಸ್ಯೆಗಳು ಹಾಗೆಯೇ ಉಳಿದಿವೆ. ಇದೆಲ್ಲಾ ಮಾಮೂಲು ಎಂಬ ಹಾರಿಕೆಯ ಉತ್ತರ ಕೇಳಿ ಆಘಾತವಾಯಿತು.  ವಿಷಯ ತಿಳಿದ ನಂತರ ದೇವಾಲಯದ ಸಿಬ್ಬಂದಿ ತಮ್ಮನ್ನು ನಿಂದಿಸಲು ಮತ್ತು ಬೆದರಿಸಲು ಪ್ರಯತ್ನಿಸಿದರು ಎಂದು ಭಕ್ತ ಆರೋಪಿಸಿದ್ದಾರೆ.

ತಿರುಪತಿ ಲಡ್ಡು ವಿವಾದದ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸಿಬಿಐ, ರಾಜ್ಯ ಪೊಲೀಸ್ ಮತ್ತು ಎಫ್‌ಎಸ್‌ಎಸ್‌ಎಐ ಅಧಿಕಾರಿಗಳನ್ನು ಒಳಗೊಂಡಿರುವ ಹೊಸ ಐದು-ಸದಸ್ಯರ ಸ್ವತಂತ್ರ ಎಸ್‌ಐಟಿಯನ್ನು ರಚಿಸಲು ಸೂಚಿಸಿದೆ. ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರ ಪೀಠ ಪ್ರಕರಣದ ವಿಚಾರಣೆ ನಡೆಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments