ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹರಾಜಿನಲ್ಲಿ ಯಶ್ ದಯಾಳ್ ನನ್ನು ಖರೀದಿಸಿ 5 ಕೋಟಿ ರೂ.ವನ್ನು ಚರಂಡಿಗೆ ಚೆಲ್ಲಿದರು ಎಂದು ವ್ಯಂಗ್ಯವಾಡಿದ್ದರು ಎಂದು ಯಶ್ ದಯಾಳ್ ತಂದೆ ಚಂದ್ರಪಾಲ್ ಹೇಳಿಕೊಂಡಿದ್ದಾರೆ.
ಉತ್ತರ ಪ್ರದೇಶದ ಮಧ್ಯಮ ವೇಗಿ ಯಶ್ ದಯಾಳ್ 2023ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಂಡಿದ್ದರು. ರಿಂಕು ಸಿಂಗ್ ಕೊನೆಯ ಓವರ್ ಎಸೆದ ಯಶ್ ದಯಾಳ್ ಓವರ್ ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದರು.
ಈ ಪಂದ್ಯದಿಂದ ಯಶ್ ದಯಾಳ್ ಭಾರೀ ಟೀಕೆಗೆ ಗುರಿಯಾಗಿದ್ದರು. ಆದರೆ ಇಷ್ಟಾದರೂ ಆರ್ ಸಿಬಿ ತಂಡ ಹರಾಜಿನಲ್ಲಿ 5 ಕೋಟಿ ರೂ.ಗೆ ಖರೀದಿಸಿದ್ದರು. ಇಷ್ಟು ಮೊತ್ತಕ್ಕೆ ಯಶ್ ದಯಾಳ್ ಅವರನ್ನು ಖರೀದಿಸಿದ್ದಕ್ಕೆ ಹಲವಾರು ಮಂದಿ ಟೀಕೆ ವ್ಯಕ್ತಪಡಿಸಿದ್ದು, ಚರಂಡಿಗೆ 5 ಕೋಟಿ ಹಾಕಿದರು ಎಂದು ವ್ಯಂಗ್ಯವಾಡಿದ್ದರು ಎಂದು ತಂದೆ ನೆನಪಿಸಿಕೊಂಡಿದ್ದಾರೆ.
ನನ್ನ ಮಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಅತ್ಯಂತ ಮಹತ್ವದ ಪಂದ್ಯದಲ್ಲಿ ಕೊನೆಯ ಓವರ್ ಎಸೆದರು. ಧೋನಿ ವಿಕೆಟ್ ಪಡೆದಿದ್ದೂ ಅಲ್ಲದೇ ಆರ್ ಸಿಬಿಗೆ 27 ರನ್ ರೋಚಕ ಗೆಲುವು ತಂದುಕೊಟ್ಟು ಪ್ಲೇಆಫ್ ಪ್ರವೇಶಿಸುವಲ್ಲಿ ಮಹತ್ವದ ಪಾತ್ರರಾಗಿ ರಾತ್ರೋರಾತ್ರಿ ಸ್ಟಾರ್ ಆಟಗಾರನಾಗಿ ಉದಯಿಸಿದರು.
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿರುವ ಚಂದ್ರಕಾಂತ್, ವಾಟ್ಸಪ್ ಗ್ರೂಪ್ ನಲ್ಲಿ ನನಗೆ ಗೊತ್ತಿರುವ ಒಬ್ಬರು, ಯಶ್ ದಯಾಳ್ ವೃತ್ತಿಜೀವನ ಆರಂಭವಾಗುವ ಮೊದಲೇ ಅಂತ್ಯಗೊಂಡಿತು ಎಂದು ಟೀಕಿಸಿದ್ದರು. ಮತ್ತೊಬ್ಬರು 5 ಕೋಟಿಗೆ ಖರೀದಿಸಿ ಆರ್ ಸಿಬಿ ಚರಂಡಿಗೆ ಹಣ ಹಾಕಿದೆ ಎಂದು ಹೇಳಿದ್ದರು. ಆದರೆ ನನ್ನ ಮಗ ಎಲ್ಲರಿಗೂ ತಕ್ಕ ಉತ್ತರ ಕೊಟ್ಟಿದ್ದಾನೆ ಎಂದು ಹೇಳಿದರು.