ಭಾರತದ ಆರಂಭಿಕ ಯಶಸ್ವಿ ಜೈಸ್ವಾಲ್ ಜಿಂಬಾಬ್ವೆ ವಿರುದ್ಧ ಪಂದ್ಯದ ಮೊದಲ ಎಸೆತದಲ್ಲಿ 13 ರನ್ ಕೊಳ್ಳೆ ಹೊಡೆದು ವಿಶ್ವದಾಖಲೆ ಬರೆದಿದ್ದಾರೆ.
ಹರಾರೆಯಲ್ಲಿ ಭಾನುವಾರ ನಡೆದ 5ನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಾಜಾ ಎಸೆದ ಫುಲ್ ಟಾಸ್ ನಲ್ಲಿ ಜೈಸ್ವಾಲ್ ಡೀಪ್ ಸ್ಕ್ವೇರ್ ನಲ್ಲಿ ಸಿಕ್ಸರ್ ಬಾರಿಸಿದರು.
ಅಂಪೈರ್ ಈ ಎಸೆತವನ್ನು ನೋಬಾಲ್ ಎಂದು ಘೋಷಿಸಿದರು. ಇದರಿಂದ ಜೈಸ್ವಾಲ್ ಗೆ ಫ್ರಿ ಹಿಟ್ ಅವಕಾಶ ಸಿಕ್ಕಿತು. ಉದ್ದದ ಈ ಎಸೆತವನ್ನು ಜೈಸ್ವಾಲ್ ಸಿಕ್ಸರ್ ಸಿಡಿಸಿ 12 ರನ್ ಕೊಳ್ಳೆ ಹೊಡೆದರು. ನೋಬಾಲ್ ಎಸೆತಕ್ಕಾಗಿ 1 ರನ್ ಸೇರಿ ಒಟ್ಟು 13 ರನ್ ಹರಿದು ಬಂದಿತು.
ಒಂದೇ ಎಸೆತದಲ್ಲಿ ಸತತ 2 ಸಿಕ್ಸರ್ ಬಾರಿಸುವ ಮೂಲಕ ಜೈಸ್ವಾಲ್ ಇನಿಂಗ್ಸ್ ನ ಮೊದಲ ಎಸೆತದಲ್ಲೇ 12 ರನ್ ಬಾರಿಸುವ ಮೂಲಕ ವಿಶ್ವದಾಖಲೆ ಬರೆದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 167 ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡವನ್ನು 18.3 ಓವರ್ ಗಳಲ್ಲಿ 125 ರನ್ ಗೆ ಆಲೌಟ್ ಮಾಡಿದ ಭಾರತ ತಂಡ 42 ರನ್ ಗಳಿಂದ ಜಯಭೇರಿ ಬಾರಿಸಿತು. ಅಲ್ಲದೇ 5 ಪಂದ್ಯಗಳ ಟಿ-20 ಸರಣಿಯನ್ನು 4-1ರಿಂದ ವಶಪಡಿಸಿಕೊಂಡಿತು.
https://twitter.com/SonySportsNetwk/status/1812449892515635388