Monday, November 25, 2024
Google search engine
Homeತಾಜಾ ಸುದ್ದಿಬಿಎಂಟಿಸಿ ಬಸ್ ಗೆ ಬೈಕ್ ಡಿಕ್ಕಿ ಹೊಡೆದು ಯುವತಿ ಸಾವು

ಬಿಎಂಟಿಸಿ ಬಸ್ ಗೆ ಬೈಕ್ ಡಿಕ್ಕಿ ಹೊಡೆದು ಯುವತಿ ಸಾವು

ಬಿಎಂಟಿಸಿ ಬಸ್‌ ಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೆಂಗಳೂರಿನ ಉಲ್ಲಾಳ್ ಉಪನಗರದ ಬಸ್ ನಿಲ್ದಾಣದ ಬಳಿ ಸಂಭವಿಸಿದೆ.

ಸ್ಥಳೀಯ ನಿವಾಸಿಯಾಗಿರುವ ಖಾಸಗಿ ಕಂಪನಿಯ ಉದ್ಯೋಗಿ 25 ವಯಸ್ಸಿನ ಮೋನಿಕಾ ಮೃತ ಯುವತಿ.

ಬಿಎಂಟಿಸಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಜೊತೆಗೆ ಮಹಿಳೆ ಬಸ್‌ನ ಬಲಭಾಗಕ್ಕೆ ಬಿದ್ದಿದ್ದಾರೆ. ಪರಿಣಾಮ ಎದುರುಗಡೆಯಿಂದ ಬರುತ್ತಿದ್ದ ಕಾರು ಬಸ್‌ಗೆ ಗುದ್ದಿ ರಸ್ತೆಯಲ್ಲಿ ಬಿದ್ದ ಮಹಿಳೆಯ ಮೇಲೆ ಹರಿದಿದೆ. ಘಟನೆಯಲ್ಲಿ ಬೈಕ್ ನಜ್ಜುಗುಜ್ಜಾಗಿದ್ದು, ಮಹಿಳೆ ಮೃತಪಟ್ಟಿದ್ದಾರೆ.

ಬಿಎಂಟಿಸಿ ಬಸ್ ಉಲ್ಲಾಳ ಉಪನಗರ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್ ಕಡೆ ಹೋಗುವಾಗ ಉಲ್ಲಾಳ ಕೆರೆಯ ಬಳಿ ಕೆಲಸಕ್ಕೆ ಹೋಗುವ ಆತುರದಲ್ಲಿ ಸಿಂಗಲ್ ರೋಡ್‌ನಲ್ಲಿ ಬಂದಿದ್ದರಿಂದ ಈ ಅವಘಢ ಸಂಭವಿಸಿದೆ.

‘ಆತುರವಾಗಿ ಬೈಕ್ ನಲ್ಲಿ ಬಂದ ಯುವತಿ ಎದುರುಗಡೆಯಿಂದ ಬರುತ್ತಿದ್ದ ನಮ್ಮ ಬಸ್‌ ಮುಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ರಸ್ತೆ ಮೇಲೆ ಬಿದ್ದಾಗ ಎದುರುಗಡೆ ಬರುತ್ತಿದ್ದ ಕಾರು ಹರಿದು ಮಹಿಳೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ನಮ್ಮದೇನು ತಪ್ಪಿಲ್ಲ ಎಂದ ಚಾಲಕ ಸುರೇಶ್ ಹೇಳಿದ್ದಾರೆ. ಘಟನೆ ಸಂಬಂದ ಮೃತ ಮಹಿಳೆ ಮೋನಿಕಾ ಸಂಬಂಧಿಕರು ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಬಿಎಂಟಿಸಿ ಬಸ್ ಹಾಗೂ ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments