Friday, November 22, 2024
Google search engine
Homeಅಪರಾಧ7ನೇ ಮಹಡಿಯಿಂದ ಹಾರಿ ಯೂಟ್ಯೂಬರ್ ಜೋಡಿ ಆತ್ಮಹತ್ಯೆ

7ನೇ ಮಹಡಿಯಿಂದ ಹಾರಿ ಯೂಟ್ಯೂಬರ್ ಜೋಡಿ ಆತ್ಮಹತ್ಯೆ

ಯೂಟ್ಯೂಬ್ ಚಾನೆಲ್ ನಡೆಸುತ್ತಾ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಯುವ ಜೋಡಿ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದಲ್ಲಿ ನಡೆದಿದೆ.

ಬಹದ್ದೂರ್ ಗಢದಲ್ಲಿ ಇತ್ತೀಚೆಗಷ್ಟೇ ಖರೀದಿಸಿದ್ದ ಅಪಾರ್ಟ್ ಮೆಂಟ್ ನ 7ನೇ ಮಹಡಿಯಲ್ಲಿ ಫ್ಲಾಟ್ ಖರೀದಿಸಿದ್ದ 25 ವರ್ಷದ ಗಾರ್ವಿತ್ ಮತ್ತು 22 ವರ್ಷದ ನಂದಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶೂಟಿಂಗ್ ಮುಗಿಸಿಕೊಂಡು ಬಂದಿದ್ದ ಜೋಡಿ ಕ್ಷುಲಕ ವಿಷಯಕ್ಕೆ ಜಗಳ ಮಾಡಿಕೊಂಡಿದ್ದಾರೆ. ಇಬ್ಬರು ತಮ್ಮದೇ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು.

ಹೊಸದಾಗಿ ಖರೀದಿಸಿದ್ದ ಅಪಾರ್ಟ್ ಮೆಂಟ್ ನಲ್ಲಿ ಇಡೀ ತಂಡವನ್ನು ಸ್ಥಳಾಂತರಿದ್ದರು. ಶೂಟಿಂಗ್ ಮುಗಿಸಿ ಫ್ಲಾಟ್ ಗೆ ಮರಳಿದ ನಂತರ ಇಬ್ಬರ ನಡುವೆ ಶೂಟ್ ಗೆ ಸಂಬಂಧಿಸಿ ಆರಂಭವಾದ ಜಗಳ ಸಾವಿನಲ್ಲಿ ಅಂತ್ಯಗೊಂಡಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments