ಸ್ಪಿನ್ನರ್ ರವಿ ಬಿಶ್ನೋಯಿ ಸ್ಪಿನ್ ಬಲೆಗೆ ಬಿದ್ದ ಜಿಂಬಾಬ್ವೆ ತಂಡ ಮೊದಲ ಟಿ-20 ಪಂದ್ಯದಲ್ಲಿ ಭಾರತಕ್ಕೆ 116 ರನ್ ಗುರಿ ಒಡ್ಡಿದೆ.
ಹರಾರೆಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಶುಭಮನ್ ಗಿಲ್ ಎದುರಾಳಿ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಜಿಂಬಾಬ್ವೆ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿತು.
ಜಿಂಬಾಬ್ವೆ ಪರ ವೆಸ್ಲೆ ಮಧವೇರೆ (21), ಬ್ರಿಯಾನ್ ಬೆನೆಟ್ (22) ಮತ್ತು ಡಿಯೊನ್ ಮೈರೆಸ್ (23) ಉತ್ತಮ ಪೈಪೋಟಿ ಒಡ್ಡಿದರು. ಕೊನೆಯಲ್ಲಿ ಕ್ಲೇವ್ ಮಡೇನ್ 25 ಎಸೆತದಲ್ಲಿ 4 ಬೌಂಡರಿ ಸೇರಿದ 29 ರನ್ ಬಾರಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಭಾರತದ ಪರ ರವಿ ಬಿಶ್ನೋಯಿ 4 ವಿಕೆಟ್ ಪಡೆದು ಮಿಂಚಿದರೆ, ವಾಷಿಂಗ್ಟನ್ ಸುಂದರ್ 2 ಮತ್ತು ಮುಖೇಶ್ ಕುಮಾರ್ ಮತ್ತು ಆವೇಶ್ ಖಾನ್ ತಲಾ 1 ವಿಕೆಟ್ ಗಳಿಸಿದರು.