ಮುಂಬರುವ ಲೋಕಸಭಾ ಚುನಾವಣೆಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನಾಯಕತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇಂಡಿಯಾ ಮೈತ್ರಿಕೂಟ ಮೆಚ್ಚುಗೆ ವ್ಯಕ್ತಪಡಿಸಿದೆ.
ವರ್ಷಕ್ಕೆ 10 ಗ್ಯಾಸ್ ಸಿಲಿಂಡರ್ ಉಚಿತ, ಮಾಸಿಕ 5 ಕೆಜಿ ಅಕ್ಕಿ ಉಚಿತ, ಸಿಎಎ ಕಾನೂನು ಜಾರಿ ಮಾಡುವುದಿಲ್ಲ ಎಂಬುದು ಸೇರಿದಂತೆ ಹಲವು ಮೈತ್ರಿಕೂಟದ ಸದಸ್ಯ ಪಕ್ಷಗಳು ತಮ್ಮ ರಾಜ್ಯದಲ್ಲಿ ಘೋಷಿಸಿದ ಘೋಷಣೆಗಳನ್ನು ಟಿಎಂಸಿ ಅನುಸರಿಸಿದೆ.
ಪ್ರತಿ ವರ್ಷ ಎಲ್ಲರಿಗೂ 10 ಗ್ಯಾಸ್ ಸಿಲಿಂಡರ್ ಉಚಿತವಾಗಿ ನೀಡಲಾಗುವುದು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಮಾಸಿಕ 5 ಕೆಜಿ ಅಕ್ಕಿ, ಗೋಧಿ ಅಥವಾ ಧಾನ್ಯ ಉಚಿತವಾಗಿ ನೀಡಲಾಗುವುದು ಎಂದು ಟಿಎಂಸಿ ಘೋಷಿಸಿದೆ.