ರಷ್ಯಾ 100 ಡ್ರೋಣ್ ಮತ್ತು 100 ಕ್ಷಿಪಣಿಗಳಿಂದ ದಾಳಿ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಝೇಲೆನ್ಕಿ ಆರೋಪಿಸಿದ್ದು, ಯುರೋಪ್ ರಾಷ್ಟ್ರಗಳು ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ಸೋಮವಾರ ರಷ್ಯಾ ಭಾರೀ ಪ್ರಮಾಣದ ವೈಮಾನಿಕ ದಾಳಿ ನಡೆಸಿದೆ. ಇದರಿಂದ ಯುರೋಪಿಯನ್ ರಾಷ್ಟ್ರಗಳು ವೈಮಾನಿಕ ದಾಳಿ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಉಕ್ರೇನ್ ಅಧ್ಯಕ್ಷ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಮನವಿ ಮಾಡಿದ್ದಾರೆ.
ಯುರೋಪಿಯನ್ ರಾಷ್ಟ್ರಗಳು ವೈಮಾನಿಕ ದಾಳಿ ತಡೆಯಲು ನೆರವು ನೀಡಿದರೆ ಸಾಕಷ್ಟು ಜೀವಗಳನ್ನು ರಕ್ಷಿಸಬಹುದು. ರಷ್ಯಾ ಭಾರೀ ಪ್ರಮಾಣದಲ್ಲಿ ಉಕ್ರೇನ್ ನ ಹಲವು ಪ್ರದೇಶಗಳ ಮೇಲೆ ದಾಳಿ ನಡೆಸಿದೆ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರಾಚ್ಯ ರಾಷ್ಟ್ರಗಳ ರಕ್ಷಣೆಗೆ ಯುರೋಪ್ ರಾಷ್ಟ್ರಗಳಳು ನೆರವಿಗೆ ಧಾವಿಸಬೇಕು. ಯಾವುದೇ ಜೀವವಾದರೂ ಬೆಲೆ ಇದೆ. ಜೀವಗಳ ರಕ್ಷಣೆಗೆ ಒತ್ತು ನೀಡಬೇಕಿದೆ ಎಂದು ಅವರು ಹೇಳಿದರು.
ಇದೇ ವೇಳೆ ರಷ್ಯಾದ ದೂರಗಾಮಿ ದಾಳಿಯನ್ನು ಯಶಸ್ವಿಯಾಗಿ ನಿಯಂತ್ರಿಸುತ್ತಿದೆ. ಆದರೆ ವೈಮಾನಿಕ ದಾಳಿ ಅದರಲ್ಲೂ ಡ್ರೋಣ್ ಮತ್ತು ಕ್ಷಿಪಣಿ ದಾಳಿ ನಿಯಂತ್ರಿಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.