ಭಾರೀ ಮಳೆಯಿಂದ ತತ್ತರಿಸಿದ್ದ ಗುಜರಾತ್ ನಲ್ಲಿ ಸಾಂಕ್ರಮಿಕ ರೋಗಗಳ ಭೀತಿ ಆವರಿಸಿದ್ದು,ಮ ಗುಜರಾತ್ ನ ಕಚಚ್ ಜಿಲ್ಲೆಯಲ್ಲಿ 13 ಮಂದಿ ನಿಗೂಢ ಕಾಯಿಲೆಯಿಂದ ಮೃತಪಟ್ಟಿದ್ದಾರೆ.
ಗುಜರಾತ್ ನಲ್ಲಿ ಜನರಿಗೆ ತೀವ್ರ ತರಹದ ಜ್ವರ ಕಾಣಿಸಿಕೊಳ್ಳುತ್ತಿದೆ. ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರಕ್ಕೆ ಔಷಧ ಗೊತ್ತಾಗುತ್ತಿಲ್ಲ. ಹೊಸ ರೀತಿಯ ವೈರಸ್ ಕಾಣಿಸಿಕೊಂಡಿದ್ದು, ವೈದ್ಯರು ಈ ವೈರಸ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.
ಭಾನುವಾರ ಬೆಳಿಗ್ಗೆ 12 ವರ್ಷದ ಬಾಲಕ ಸ್ಯಾಂಡ್ರೊ ಗ್ರಾಮದಲ್ಲಿ ಮೃತಪಟ್ಟಿದ್ದಾನೆ. ಇದರಿಂದ ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ತೀವ್ರತರದ ಜ್ವರ ಕಾಣಿಸಿಕೊಳ್ಳುತ್ತಿದ್ದು, ಜ್ವರ ಯಾವುದು? ಔಷಧ ಯಾವುದು ಕೊಡುವುದು? ಎಂದು ಗೊತ್ತಾಗದೇ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಜನರ ತಲೆಯಲ್ಲಿ ಈಗ ಇರುವುದು ಭುಜ್-ಅಹಮದಾಬಾದ್ ಭಾಗದಲ್ಲಿ ಕಾಡುತ್ತಿರುವ ಜ್ವರ ಯಾವುದು? ಇದಕ್ಕೆ ಔಷಧ ಏನು ಎಂಬುದು. ಈ ಬಗ್ಗೆ ವೈದ್ಯರಿಗೂ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಮೊಹಮದ್ ಜುಂಗ್ ತಿಳಿಸಿದ್ದಾರೆ.
ಜ್ವರ, ತಲೆನೋವು, ಶೀತ, ಕೋಲ್ಡ್ ಲಕ್ಷಣಗಳು ರೋಗಿಗಳಲ್ಲಿ ಕಂಡುಬರುತ್ತಿದೆ. ಜ್ವರ ಹೆಚ್ಚಾಗುತ್ತಿದ್ದಂತೆ ಗಂಟಲು ಮತ್ತು ಲಿವರ್ ಹಾನಿಗೊಳಗಾಗಿ ರೋಗಿಗಳು ಮೃತಪಡುತ್ತಿದ್ದಾರೆ. ವೃದ್ಧರು ಜ್ವರ ಕಾಣಿಸಿಕೊಂಡ ಎರಡೇ ದಿನದಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಡೆಂಗ್ಯೂ, ಮಲೇರಿಯಾ, ಹಂದಿಜ್ವರ, ಎಚ್1ಎನ್1 ಸೇರಿದಂತೆ ಎಲ್ಲಾ ಮಾದರಿಯ ಜ್ವರ,ಶೀತದ ಲಕ್ಷಣ ಹೊಂದಿರುವ ಕಾಯಿಲೆಗಳ ವೈರಸ್ ಗಳ ಜೊತೆ ಹೋಲಿಕೆ ಮಾಡಿ ನೋಡಲಾಗುತ್ತಿದೆ. ಆದರೆ ಹೋಲಿಕೆ ಕಂಡು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೋಗಿಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ ಗಳಿಗೆ ಕಳುಹಿಸಲಾಗಿದೆ ಎಂದು ಹಿರಿಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.