ತನಗಿಂತ 15 ವರ್ಷ ಚಿಕ್ಕ ವಯಸ್ಸಿನ ಪೊಲೀಸ್ ಕಾನ್ ಸ್ಟೇಬಲ್ ಜೊತೆ 2.5 ಕೋಟಿ ಚಿನ್ನಾಭರಣದ ಜೊತೆ ಬಿಜೆಪಿ ನಾಯಕಿ ಪರಾರಿಯಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ನಡೆದಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ 45 ವರ್ಷದ ಮಹಿಳೆ ಬಿಜೆಪಿ ಸದಸ್ಯೆ ಆಗಿದ್ದು, ಮದುವೆ ಆಗಿ ಎರಡು ಮಕ್ಕಳು ಇದ್ದು, ಒಂದು ಮಗುವನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದರೆ, ಮತ್ತೊಂದು ಮಗುವನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ.
ತನಗಿಂತ 15 ವರ್ಷ ಕಿರಿಯ 30 ವರ್ಷದ ಪೊಲೀಸ್ ಪೇದೆ ತಮ್ಮದೇ ಮನೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪ್ರೀತಿ ಓಡಿ ಹೋಗುವ ಮಟ್ಟಕ್ಕೆ ಹೋಗಿದ್ದು. ಪರಾರಿಯಾಗುವಾಗ ಮಹಿಳೆ 2.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ 4 ಲಕ್ಷ ರೂ. ನಗದು ಹೊತ್ತೊಯ್ದಿದ್ದಾರೆ.
ಚಿನ್ನಾಭರಣ ಹಾಗೂ ನಗದು ಕದ್ದು ಪತ್ನಿ ಮನೆಯಿಂದ ಓಡಿ ಹೋಗಿರುವುದಾಗಿ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಕಾನ್ಸ್ ಟೇಬಲ್ ಹಣಕ್ಕಾಗಿ ಪತ್ನಿಗೆ ಆಮಿಷ ಒಡ್ಡಿದ್ದು ಜೀವ ಬೆದರಿಕೆ ಹಾಕಬಹುದು ಎಂದು ಪತಿಯೂ ಆತಂಕ ವ್ಯಕ್ತಪಡಿಸಿದ್ದಾರೆ.
ಕಾನ್‌ಸ್ಟೆಬಲ್ ಅವರ ಹೆಂಡತಿಯನ್ನು ಮೋಸದಿಂದ ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದ. ಅಶ್ಲೀಲ ರೀತಿಯಲ್ಲಿ ಆಕೆಯ ಫೋಟೋಗಳನ್ನು ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಈ ವಿಷಯವನ್ನು ಬಹಿರಂಗಪಡಿಸಿದರೆ ಕುಟುಂಬವನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದ ಎಂದು ಪತಿ ದೂರಿನಲ್ಲಿ ಆರೋಪಿಸಿದ್ದಾರೆ.
ಪತ್ನಿ ಹಾಗೂ ಕಾನ್‌ಸ್ಟೆಬಲ್ ಪತ್ತೆಗೆ ಯತ್ನಿಸಿದರೂ ಪತ್ತೆಯಾಗಿಲ್ಲ. ಈ ಘಟನೆಯಲ್ಲಿ ಸ್ಥಳೀಯರ ಕೈವಾಡವಿದೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆ ಹಾಗೂ ಕಾನ್‌ಸ್ಟೆಬಲ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ.