ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ವಿಶ್ವದಲ್ಲೇ ಅತ್ಯಂತ ದುಬಾರಿ ಮದುವೆ ಆಗಲಿದ್ದು, ಈಗಾಗಲೇ ಅತಿಥಿಗಳನ್ನು ಕರೆತರಲು 3 ಫಾಲ್ಕೂನ್-2000 ಜೆಟ್ ಹಾಗೂ 100 ವಿಮಾನಗಳನ್ನು ಬುಕ್ ಮಾಡಲಾಗಿದೆ.
ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾಗಿರುವ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ದೀರ್ಘಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಅವರನ್ನು ಜುಲೈ 12ರಿಂದ 15ರವರೆಗೆ ನಡೆಯಲಿರುವ ಸಮಾರಂಭದಲ್ಲಿ ಅದ್ಧೂರಿಯಾಗಿ ಮದುವೆ ಆಗಲಿದ್ದಾರೆ.
ಜಗತ್ತಿನ ನಾನಾ ಕಡೆಗಳಿಂದ ಗಣ್ಯರು ಆಗಮಿಸುತ್ತಿದ್ದು, ಗಣ್ಯರ ಆಹ್ವಾನಕ್ಕೆ 3 ಫಾಲ್ಕೂನ್ ಜೆಟ್ ಹಾಗೂ 100 ವಿಮಾನಗಳನ್ನು ಮುಂಗಡವಾಗಿ ಬುಕ್ಕಿಂಗ್ ಮಾಡಲಾಗಿದೆ.
ಈ ವಿಮಾನಗಳು ಜಗತ್ತಿನಾದ್ಯಂತ ಹಲವು ಬಾರಿ ಪ್ರಯಾಣಿಸಲಿದ್ದ, ಗಣ್ಯರನ್ನು ಮದುವೆ ನಡೆಯುವ ಸ್ಥಳಕ್ಕೆ ನೇರವಾಗಿ ಕರೆತರಲಿವೆ.
ಕುರ್ಲಾ-ಬಾಂಧ್ರಾ ಮಾರ್ಗದಲ್ಲಿ ಕೇವಲ ಮದುವೆ ಕಾರ್ಯಕ್ರಮಕ್ಕೆ ಹೋಗುವ ವಾಹನಗಳಿಗಷ್ಟೇ ಅನುಮತಿ ನೀಡಲಾಗಿದ್ದು, ಸಾರ್ವಜನಿಕ ವಾಹನಗಳನ್ನು ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈನ ಹಲವಾರು ಕಂಪನಿಗಳು ತಮ್ಮ ಸಿಬ್ಬಂದಿಗೆ ಜುಲೈ 15ರಂದು ಮದುವೆ ಸಮಾರಂಭದ ದಿನ ಮನೆಯಲ್ಲೇ ಕೆಲಸ ಮಾಡುವಂತೆ ಸೂಚಿಸಿದೆ.
ಹಾಲಿವುಡ್ ಮತ್ತು ಬಾಲಿವುಡ್ ಸ್ಟಾರ್ ಗಳು ಅಲ್ಲದೇ ಚಿತ್ರರಂಗದ ಸ್ಟಾರ್ ಗಳು, ವಿವಿಧ ದೇಶಗಳ ಗಣ್ಯರು, ದೇಶದ ಪ್ರಮುಖರು ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.