ಮಹತ್ವದ ಬೆಳವಣಿಗೆಯೊಂದರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
2016ರಲ್ಲಿ ನಡೆದ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವ ಕೋಲ್ಕತಾ ಹೈಕೋರ್ಟ್, ಅನುದಾನಿತ ಶಾಲೆಗಳ 25,000 ಶಿಕ್ಷಕರ ನೇಮಕಾತಿಯನ್ನು ಸಂಪೂರ್ಣ ರದ್ದುಗೊಳಿಸಿದ್ದು, ನೇಮಕಗೊಂಡಿದ್ದ ಶಿಕ್ಷಕರು ತಮ್ಮ ವೇತನವನ್ನು ವಾಪಸ್ ಮಾಡುವಂತೆ ಸೂಚಿಸಿದೆ.
ನ್ಯಾಯಮೂರ್ತಿ ದೇಭಾಂಗು ಬಾಸಕ್ ಮತ್ತು ನ್ಯಾಯಮೂರ್ತಿ ಮೊಹಮದ್ ಶಬ್ಬರ್ ರಶ್ದಿ ಅವರನ್ನೊಳಗೊಂಡ ವಿಭಾಗೀಯ ಪೀಠ, 25,763 ಶಿಕ್ಷಕರ ನೇಮಕಾತಿ ರದ್ದುಗೊಳಿಸಿದ್ದು, ಶಿಕ್ಷಕರು ಶೇ.12ರಷ್ಟು ಬಡ್ಡಿ ಸೇರಿಸಿ ಇದುವರೆಗೆ ಪಡೆದ ವೇತನವನ್ನು ಹಿಂತಿರುಗಿಸಬೇಕು. ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು ಹಣ ಸಂಗ್ರಹಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಸೂಚಿಸಿದೆ.