ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 7 ಶಿಶುಗಳು ಮೃತಪಟ್ಟ ದಾರಣ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.
ದೆಹಲಿಯ ವಿವೇಕ್ ವಿಹಾರ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದಾದ 12 ನವಜಾತ ಶಿಶುಗಳು ಇದ್ದವು ಎಂದು ತಿಳಿದು ಬಂದಿದೆ.
ಅಗ್ನಿ ದುರಂತದಲ್ಲಿ 6 ಶಿಶುಗಳು ಮೃತಪಟ್ಟಿದ್ದರೆ, ಅದಕ್ಕೂ ಮುನ್ನವೇ ಒಂದು ಮಗು ಸಾವಿಗೀಡಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂ ಬಾರ್ನ್ ಬೇಬಿ ಕೇರ್ ಆಸ್ಪತ್ರೆಯ ಮಾಲೀಕ ನವೀನ್ ಕಿಚ್ಚಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನವೀನ್ ಕಿಚ್ಚಿ ಘಟನೆ ನಡೆಯುತ್ತಿದ್ದಂತೆ ಜೈಪುರಕ್ಕೆ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.