ಹಿರಿಯ ಪೈಲೆಟ್ ಗಳು ಏಕಾಏಕಿ ಯಾವುದೇ ನೋಟಿಸ್ ನೀಡಿದೇ ಅನಾರೋಗ್ಯದ ಕಾರಣ ನೀಡಿ ರಜೆ ಹಾಕಿದ್ದರಿಂದ ದೇಶೀಯ 78 ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಕೇಂದ್ರ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು, ಇಂತಹ ಸಮಸ್ಯೆಗಳನ್ನು ಪ್ರಮಾಣಿಕವಾಗಿ ಬಗೆಹರಿಸಿಕೊಂಡು ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳುವಂತೆ ನೋಟಿಸ್ ಜಾರಿ ಮಾಡಿದೆ.
ಏರ್ ಇಂಡಿಯಾ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಸಿಬ್ಬಂದಿಗೆ ಭತ್ಯೆ ಮುಂತಾದ ಸವಲತ್ತುಗಳನ್ನು ಕಾರ್ಯ ವೈಖರಿ ಆಧಾರದ ಮೇಲೆ ನೀಡುವ ವ್ಯವಸ್ಥೆಗೆ ಅಸಮಾಧಾನಗೊಂಡಿದ್ದಾರೆ. ಈ ಕಾರಣದಾಗಿ ಅನಾರೋಗ್ಯದ ನೆಪವೊಡ್ಡಿ ದಿಢೀರ್ ರಜೆ ಹಾಕಿದ್ದಾರೆ ಎಂದು ಮಾಧ್ಯಮಗಳಿಗೆ ಸಂಸ್ಥೆ ಹೇಳಿದೆ.
ವಿಮಾನ ನಿಲ್ದಾಣಗಳಲ್ಲಿನ ಒತ್ತಡ ನಿವಾರಣೆಗೆ ಸಿಬ್ಬಂದಿ ಆಗ್ರಹಿಸಿದ್ದಾರೆ. ಅಲ್ಲದೇ ಸಂಸ್ಥೆಯ ಯಾವುದೇ ಸವಲತ್ತು ವಿಮಾನದಲ್ಲಿನ ಸಿಬ್ಬಂದಿಗೆ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.