ಪ್ರವಾಸಕ್ಕೆ ಹೊರಟ್ಟಿದ್ದ ಬಸ್ ಆಕಸ್ಮಿಕ ಬೆಂಕಿಯಿಂದ ಭಸ್ಮಗೊಂಡಿದ್ದರಿಂದ ಬಸ್ ನಲ್ಲಿದ್ದ 9 ಮಂದಿ ಯಾತ್ರಾರ್ಥಿಗಳು ಸಜೀವದಹನಗೊಂಡ ಭೀಕರ ಘಟನೆ ಉತ್ತರ ಪ್ರದೇಶದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್ ಪ್ರೆಸ್ ಎಕ್ಸ್ ಪ್ರೆಸ್ ನಲ್ಲಿ ಸಂಭವಿಸಿದೆ.
ಮಥುರಾ ಮತ್ತು ವೃಂದಾವನಕ್ಕೆ ಹೊರಟ್ಟಿದ್ದಾಗ ನುಹ್ ಎಂಬ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಬಸ್ ನಲ್ಲಿ ಪಂಜಾಬ್ ಮೂಲದ ಕುಟುಂಬಗಳು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಬಸ್ ನಲ್ಲಿ ಹಲವು ಕುಟುಂಬಗಳ ಮಕ್ಕಳು, ಮಹಿಳೆಯರು ಮುಂತಾದವರು ಸೇರಿದಂತೆ 60 ಮಂದಿ ಪ್ರಯಾಣಿಸುತ್ತಿದ್ದರು. ಶನಿವಾರ ರಾತ್ರಿ 1.30ರ ಸುಮಾರಿಗೆ ಬಸ್ ಹಿಂಬದಿಯಿಂದ ಹೊಗೆ ಕಾಣಿಸಿಕೊಂಡಿತು ಎಂದು ಬದುಕುಳಿದ ಬಸ್ ನಲ್ಲಿದ್ದ ಪ್ರಯಾಣಿಕರು ಹೇಳಿದ್ದಾರೆ.
ಬೈಕ್ ಸವಾರನೊಬ್ಬ ಬಸ್ ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗುರುತಿಸಿ ಬಸ್ ಚೇಸ್ ಮಾಡಿ ಚಾಲಕನನ್ನು ಎಚ್ಚರಿಸಿ ಬಸ್ ನಿಲ್ಲಿಸಿದ್ದಾನೆ. ಇದರಿಂದ ಭಾರೀ ದುರಂತದ ಪ್ರಮಾಣ ಕಡಿಮೆ ಆಗಿದೆ.
ದೇವಸ್ಥಾನಗಳಿಗೆ ಭೇಟಿ ನೀಡಲು 10 ದಿನಗಳಿಗಾಗಿ ಬಸ್ ಪಡೆದಿದ್ದವು. ಆದರೆ ಶನಿವಾರ ತಡರಾತ್ರಿ ನಿದ್ದೆಯಲ್ಲಿ ಇದ್ದಿದ್ದರಿಂದ ಏನಾಗುತ್ತಿದೆ ಎಂದು ತಿಳಿಯಲಿಲ್ಲ. ಬೈಕ್ ಸವಾರ ಎಚ್ಚರಿಸುವಷ್ಟರಲ್ಲಿ ಬೆಂಕಿ ಬಸ್ ಅನ್ನು ಆವರಿಸಿತ್ತು ಎಂದು ಪ್ರಯಾಣಿಕರು ವಿವರಿಸಿದ್ದಾರೆ.