ಶುಕ್ರವಾರ ನಮಾಜ್ ಮಾಡಲು 2 ಗಂಟೆ ವಿರಾಮ ನೀಡುವ ನಿಯಮವನ್ನು ರದ್ದುಗೊಳಿಸಿದ್ದಾಗಿ ಹಿಮಾಚಲ ಪ್ರದೇಶ ಸಿಎಂ ಹಿಮಂತ್ ಬಿಸ್ವಾ ಶರ್ಮ ಘೋಷಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಶುಕ್ರವಾರ ಈ ವಿಷಯ ಹೇಳಿದ ಅವರು, ವಸಹಾತುಶಾಹಿ ಪರಂಪರೆಗೆ ನಾಂದಿ ಹಾಡಬೇಕಿದೆ. ಅಲ್ಲದೇ ಕೆಲಸದ ಅವಧಿ ಹೆಚ್ಚಿಸುವ ಉದ್ದೇಶದಿಂದ ಶುಕ್ರವಾರ ನಮಾಜ್ ಗೆ ನೀಡಲಾಗುತ್ತಿದ್ದ 2 ಗಂಟೆ ವಿರಾಮ ರದ್ದುಗೊಳಿಸಲಾಗಿದೆ ಎಂದರು.
ಅಧಿವೇಶನದ ವೇಳೆ ಮುಸ್ಲಿಮ್ ಶಾಸಕರು ಮತ್ತು ಅಧಿಕಾರಿಗಳು ಶುಕ್ರವಾರ ಜುಮ್ಮಾ ನಮಾಜ್ ಮಾಡಲು ಮಧ್ಯಾಹ್ನ 2 ಗಂಟೆ ವಿರಾಮ ಪಡೆಯುತ್ತಿದ್ದರು. ಈ ನಿಯಮ ರದ್ದುಗೊಳಿಸಿರುವುದು ಐತಿಹಾಸಿಕ ನಿರ್ಣಯ ಎಂದು ಅವರು ಹೇಳಿದರು.