Sunday, November 24, 2024
Google search engine
Homeಕ್ರೀಡೆಅಂಡರ್ 19 ಭಾರತ ತಂಡದಲ್ಲಿ ಸ್ಥಾನ: ದ್ರಾವಿಡ್ ಪುತ್ರ ಸಮಿತ್ ಮೊದಲ ಪ್ರತಿಕ್ರಿಯೆ

ಅಂಡರ್ 19 ಭಾರತ ತಂಡದಲ್ಲಿ ಸ್ಥಾನ: ದ್ರಾವಿಡ್ ಪುತ್ರ ಸಮಿತ್ ಮೊದಲ ಪ್ರತಿಕ್ರಿಯೆ

ಭಾರತದ ಬ್ಯಾಟಿಂಗ್ ದಂತಕತೆ ಹಾಗೂ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ಆಸ್ಟ್ರೇಲಿಯಾ ಸರಣಿಗೆ ಪ್ರಕಟಿಸಲಾದ 19 ವರ್ಷದೊಳಗಿನವರ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕರ್ನಾಟಕ ಕ್ರಿಕೆಟ್ ಲೀಗ್ ನಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ 18 ವರ್ಷದ ಸಮಿತ್ ಇದೇ ಮೊದಲ ಬಾರಿಗೆ ಅಂಡರ್ 19 ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಧ್ಯಮ ವೇಗಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿರುವ ಸಮಿತ್ ದೇಶೀಯ ಕ್ರಿಕೆಟ್ ನಲ್ಲಿ ಈಗಾಗಲೇ ಗಮನ ಸೆಳೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಭಾರತ ಮೂರು ಏಕದಿನ ಪಂದ್ಯದ ಸರಣಿ ಆಡಲಿದ್ದು, ಪುದುಚೇರಿಯಲ್ಲಿ ಆಡಲಿದ್ದು, ಸೆಪ್ಟೆಂಬರ್ 21, 23 ಮತ್ತು 26ರಂದು ನಡೆಯಲಿದೆ.

ಭಾರತ ತಂಡದಲ್ಲಿ ಸ್ಥಾನ ಸಿಕ್ಕಿರುವುದಕ್ಕೆ ಸಂತಸವಾಗುತ್ತಿದೆ. ನನಗೆ ಹರಸಿದ ಎಲ್ಲರಿಗೂ ಧನ್ಯವಾದಗಳು. ಈ ಅವಕಾಶಕ್ಕಾಗಿ ತುಂಬಾ ಕಠಿಣ ಶ್ರಮ ವಹಿಸಿದ್ದೆ ಎಂದು ಸಮಿತ್ ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments