Monday, September 21, 2026
Google search engine
Homeಕ್ರೀಡೆಚೆನ್ನೈ ಸೂಪರ್ ಕಿಂಗ್ಸ್ ಗೆ ಜಹೀರ್ ಖಾನ್ ಹೊಸ ಕೋಚ್ ಆಗಿ ನೇಮಕ!

ಚೆನ್ನೈ ಸೂಪರ್ ಕಿಂಗ್ಸ್ ಗೆ ಜಹೀರ್ ಖಾನ್ ಹೊಸ ಕೋಚ್ ಆಗಿ ನೇಮಕ!

ಭಾರತ ತಂಡದ ಮಾಧ್ಯಮ ವೇಗಿ ಜಹೀರ್ ಖಾನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಕಳೆದ 19 ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಆಗಿದ್ದ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಅವರ ಸ್ಥಾನಕ್ಕೆ ಜಹೀರ್ ಖಾನ್ ಅವರನ್ನು ನೇಮಕ ಮಾಡಲಾಗಿದೆ.

ಸ್ಟೀಫನ್ ಫ್ಲೆಮಿಂಗ್ ಅವರನ್ನು ಇತ್ತೀಚೆಗಷ್ಟೇ ಕೋಚ್ ಸ್ಥಾನದಿಂದ ತೆರವು ಮಾಡಲಾಗಿತ್ತು.  ಈ ಹಿನ್ನೆಲೆಯಲ್ಲಿ ಕೋಚ್ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬ ಬಗ್ಗೆ ಸಾಕಷ್ಟು ಗೊಂದಲ ಹಾಗೂ ವದಂತಿಗಳು ಹರಡಿತ್ತು.

ವದಂತಿಗಳಿಗೆ ತೆರೆ ಎಳೆದಿರುವ ಸಿಎಸ್ ಕೆ ತಂಡ 2027ರ ಐಪಿಎಲ್ ಆವೃತ್ತಿಯಿಂದ ಜಹೀರ್ ಖಾನ್ ಕೋಚ್ ಆಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಘೋಷಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಇದೀಗ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಜಹೀರ್ ಖಾನ್ ಮುನ್ನಡೆಸಲಿದ್ದು, ಇವರಿಬ್ಬರು ಇದೀಗ ಮತ್ತೆ ತಂಡದಲ್ಲಿ ಒಂದಾಗಿದ್ದಾರೆ. ಇದಕ್ಕೂ ಮುನ್ನ ಧೋನಿ ನಾಯಕತ್ವದ ಭಾರತ ತಂಡದಲ್ಲಿ ಎಡಗೈ ವೇಗಿ ಜಹೀರ್ ಪ್ರಮುಖ ಬೌಲರ್ ಆಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments