Sunday, 8 November 2026 — Kannadavahini
BREAKING NEWS
ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್ ಅಪರಾಧ ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ ರಾಜ್ಯ ಎಥೆನಾಲ್ ಮಿಶ್ರಣ ಕುರಿತು 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್ ರಾಜ್ಯ ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ವಾಪಸ್: ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಹಸಿರು ನಿಶಾನೆ ರಾಜ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರಿಂದ ಜೈಲ್ ಭರೋ ಹೋರಾಟ ತೀವ್ರ ಕಾನೂನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭ: ಸುಪ್ರೀಂ ಮಹತ್ವದ ತೀರ್ಪು ಕಾನೂನು ಬಿಜೆಪಿ ವಿರುದ್ಧ ಅಪಪ್ರಚಾರ: ಡಿಕೆಶಿ, ಸಿದ್ದರಾಮಯ್ಯಗೆ ಹೈಕೋರ್ಟ್ ಬಿಗ್ ರಿಲೀಫ್ ರಾಜ್ಯ ಕೆಪಿಎಸ್ ಸಿ ಹಗರಣ: ಎಸ್ ಐಟಿ ಮುಖ್ಯಸ್ಥರಾಗಿ ಹಿತೇಂದ್ರ ನೇಮಕ ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್ ಅಪರಾಧ ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ ರಾಜ್ಯ ಎಥೆನಾಲ್ ಮಿಶ್ರಣ ಕುರಿತು 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್ ರಾಜ್ಯ ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ವಾಪಸ್: ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಹಸಿರು ನಿಶಾನೆ ರಾಜ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರಿಂದ ಜೈಲ್ ಭರೋ ಹೋರಾಟ ತೀವ್ರ ಕಾನೂನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭ: ಸುಪ್ರೀಂ ಮಹತ್ವದ ತೀರ್ಪು ಕಾನೂನು ಬಿಜೆಪಿ ವಿರುದ್ಧ ಅಪಪ್ರಚಾರ: ಡಿಕೆಶಿ, ಸಿದ್ದರಾಮಯ್ಯಗೆ ಹೈಕೋರ್ಟ್ ಬಿಗ್ ರಿಲೀಫ್ ರಾಜ್ಯ ಕೆಪಿಎಸ್ ಸಿ ಹಗರಣ: ಎಸ್ ಐಟಿ ಮುಖ್ಯಸ್ಥರಾಗಿ ಹಿತೇಂದ್ರ ನೇಮಕ
ಅಪರಾಧ

ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 25 ವೀಕ್ಷಣೆಗಳು
gunman

ಬೆಳಗಾವಿ: ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ಗನ್‌ ಮ್ಯಾನ್ ಹಣ ದುಪ್ಪಟ್ಟು ಮಾಡುವ ಆಮಿಷ ಒಡ್ಡಿ ಕೋಟ್ಯಂತರ ರೂಪಾಯಿ ದರೋಡೆಗೆ ಯತ್ನಿಸಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಗನ್‌ಮ್ಯಾನ್ ಸೇರಿ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಗನ್‌ಮ್ಯಾನ್ ಚಿದಾನಂದ ಕುರಬೆಟ್, ಸಂಜೀವ್ ಅರಭಾವಿ, ರಾಜಾರಾಮ್, ರಮೇಶ್ ಮಾಳ್ಯಾಗೋಳ, ಪ್ರಕಾಶ್, ರಾಘವೇಂದ್ರ ಕೊಪ್ಪದ್ ಹಾಗೂ ರಾಮಪ್ಪ ತಳವಾರ ಎಂದು ಗುರುತಿಸಲಾಗಿದೆ. ಈ ಘಟನೆ ಅಕ್ಟೋಬರ್ 30ರಂದು ಮೂಡಲಗಿ ಪಟ್ಟಣದಲ್ಲಿ ನಡೆದಿದ್ದು, ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಮಿಷ ಒಡ್ಡಿ ವಂಚನೆಗೆ ಸಂಚು:ಹಿಂದೆ ‘ಶಿವಂ ಅಸೋಸಿಯೇಟ್’ ಎಂಬ ಸಂಸ್ಥೆಯಲ್ಲಿ ಹಣ ಕಳೆದುಕೊಂಡಿದ್ದ ಕಲ್ಮೇಶ್ ಎಂಬ ವ್ಯಕ್ತಿಯನ್ನು ಸಂಪರ್ಕಿಸಿದ್ದ ಗನ್‌ಮ್ಯಾನ್ ಚಿದಾನಂದ ಕುರಬೆಟ್, ಕಳೆದುಕೊಂಡ ಹಣವನ್ನು ಭರ್ತಿ ಮಾಡಿಕೊಡುವುದಾಗಿ ನಂಬಿಸಿದ್ದ. ಪ್ರತಿ 1 ಲಕ್ಷ ರೂಪಾಯಿಗೆ 30 ಸಾವಿರ ರೂಪಾಯಿ ಹೆಚ್ಚುವರಿ ಲಾಭ ನೀಡುವುದಾಗಿ ಹಾಗೂ ಹಣ ನೀಡಿದರೆ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವುದಾಗಿ ಆಮಿಷ ಒಡ್ಡಿದ್ದ.

ಗನ್‌ಮ್ಯಾನ್ ಮಾತು ನಂಬಿದ ಕಲ್ಮೇಶ್, ವಿವಿಧ ಬ್ಯಾಂಕ್‌ಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸ್ನೇಹಿತರಿಂದ ಒಟ್ಟು 2.68 ಕೋಟಿ ರೂಪಾಯಿ ಸಂಗ್ರಹಿಸಿದ್ದರು. ಹಣ ಸಂಗ್ರಹವಾದ ವಿಷಯ ತಿಳಿದ ಚಿದಾನಂದ ಹಾಗೂ ಆತನ ತಂಡ, ಹಣ ಎಣಿಕೆ ಮಾಡುವ ನೆಪದಲ್ಲಿ ಕಲ್ಮೇಶ್ ಅವರನ್ನು ನಿರ್ಜನ ಶೆಡ್‌ಗೆ ಕರೆಸಿಕೊಂಡಿದೆ.

ಖಾರದ ಪುಡಿ ಎರಚಿ ದರೋಡೆಗೆ ಯತ್ನ:

ಕಲ್ಮೇಶ್ ಹಣದೊಂದಿಗೆ ಶೆಡ್‌ಗೆ ಆಗಮಿಸುತ್ತಿದ್ದಂತೆ, ಚಿದಾನಂದ ನೇತೃತ್ವದ ಗ್ಯಾಂಗ್ ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ ಹಣದೊಂದಿಗೆ ಪರಾರಿಯಾಗಲು ಯತ್ನಿಸಿದೆ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಕಲ್ಮೇಶ್ ತಮ್ಮ ಜೊತೆ ಬಂದಿದ್ದ ಯುವಕರನ್ನು ಶೆಡ್ ಹೊರಭಾಗದಲ್ಲಿ ಕಾವಲಿಗೆ ನಿಲ್ಲಿಸಿದ್ದರು. ದರೋಡೆ ಯತ್ನವನ್ನು ಗಮನಿಸಿದ ಯುವಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಗನ್‌ಮ್ಯಾನ್ ಅಮಾನತು, ಹಣ ಜಪ್ತಿ:

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳಿಂದ 2.39 ಕೋಟಿ ರೂಪಾಯಿ ನಗದನ್ನು ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಬಾಕಿ ಹಣ ಹಾಗೂ ಆತನ ಪತ್ತೆಗೆ ಜಾಲ ಬೀಸಲಾಗಿದೆ.

ಶಾಸಕ ರಮೇಶ ಜಾರಕಿಹೊಳಿ ಅವರ ಗನ್‌ಮ್ಯಾನ್ ಚಿದಾನಂದ ದರೋಡೆ ಪ್ರಕರಣದಲ್ಲಿ ಬಂಧನಕ್ಕೊಳಗಾಗುತ್ತಿದ್ದಂತೆ, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್-ಪಿ) ಕೆ. ರಾಮರಾಜನ್ ಅವರು ಆತನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8407 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment