ಪಾರ್ಟಿಯಲ್ಲಿ ಕುಣಿಯಲು ಇಬ್ಬರು ಮಹಿಳಾ ಡ್ಯಾನ್ಸರ್ ಗಳನ್ನು ಕಿಡ್ನಾಪ್ ಮಾಡಿದ್ದ 8 ಮಂದಿಯನ್ನು ಉತ್ತರಪ್ರದೇಶದಲ್ಲಿ ಬಂಧಿಸಲಾಗಿದೆ.
ಸಂಗೀತ ಕಾರ್ಯಕ್ರಮಗಳನ್ನು ನೃತ್ಯ ಮಾಡುತ್ತಿದ್ದ ಇಬ್ಬರು ಮಹಿಳಾ ಡ್ಯಾನ್ಸರ್ ಗಳನ್ನು ರನ್ಸಮ್ ನಿಂದ ಅಪಹರಿಸಲಾಗಿತ್ತು.
ಭಾನುವಾರ ನಡೆದ ಸ್ನೇಹಿತ ಅಜಿತ್ ಎಂಬಾತನ ಬರ್ತಡೆ ಪಾರ್ಟಿಯಲ್ಲಿ ಮದ್ಯ ಸೇವಿಸಿದ್ದ ಸ್ನೇಹಿತರು ಡ್ಯಾನ್ಸರ್ ಕರೆಸಿ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿಸಲು ನಿರ್ಧರಿಸಿದರು.
ಎರಡು ಫಾರ್ಚೂನರ್ ಕಾರಿನಲ್ಲಿ ಹೊರಟ ಸ್ನೇಹಿತರು ಡ್ಯಾನ್ಸರ್ ಬಳಿ ಹೋಗಿ ಪಾರ್ಟಿಗೆ ಬಂದು ಡ್ಯಾನ್ಸ್ ಮಾಡಲು ಕೇಳಿದ್ದಾರೆ.
ತಡರಾತ್ರಿ ಆಗಿದ್ದರಿಂದ ಡ್ಯಾನ್ಸರ್ ಗಳು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡು ಗನ್ ತೋರಿಸಿದ್ದಾರೆ. ಅಲ್ಲದೇ ಸ್ಥಳೀಯರನ್ನು ಬೆದರಿಸಲು ಕೆಲವು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಡ್ಯಾನ್ಸರ್ ಗಳನ್ನು ತಮ್ಮ ಜೊತೆ ಕರೆದೊಯ್ದಿದ್ದಾರೆ.
ಕಿಡ್ನಾಪ್ ಮಾಹಿತಿ ಪಡೆದ ಪೊಲೀಸರು ಅಜಿತ್ ಸಿಂಗ್ ಮನೆಯ ಮೇಲೆ ದಾಳಿ ಮಾಡಿ ಡ್ಯಾನ್ಸರ್ ಗಳನ್ನು ರಕ್ಷಿಸಿದ್ದಾರೆ. ಅಲ್ಲದೇ ಅಜಿತ್ ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ.
ಪರಾರಿಯಾಗಿದ್ದ ಇಬ್ಬರ ಸುಳಿವು ಕೊಟ್ಟವರಿಗೆ 25 ಸಾವಿರ ರೂ. ಬಹುಮಾನವನ್ನು ಪೊಲೀಸರು ಘೋಷಿಸಿದ್ದರು.
ಪರಾರಿಯಾಗಿದ್ದ ನಾಸಿರ್ ಅನ್ಸಾರಿ ಮತ್ತು ಆದಿತ್ಯಾ ಅನಾರಿ ಪೊಲೀಸ್ ಚೆಕ್ ಪೋಸ್ಟ್ ಬಳಿ ತಪಾಸಣೆ ಮಾಡುವಾಗ ಸಿಕ್ಕಿಬಿದ್ದಿದ್ದಾರೆ.
ತಪಾಸಣೆ ವೇಳೆ ಇಬ್ಬರು ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸರು ಪ್ರತಿದಾಳಿ ನಡೆಸಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಪೊಲೀಸರು ಇಬ್ಬರು ಆರೋಪಿಗಳನ್ನು ವ್ಹೀಲ್ ಚೇರ್ ನಲ್ಲಿ ಕೂರಿಸಿ ಹಾಜರುಪಡಿಸಿದ್ದು, ಕಾಲಿಗೆ ಬ್ಯಾಂಡೇಜ್ ಧರಿಸಿದ್ದ ಇಬ್ಬರೂ ಕಿವಿ ಹಿಡಿದುಕೊಂಡು ತಪ್ಪಾಗಿದೆ ಕ್ಷಮಿಸಿ, ಇನ್ನು ಮುಂದೆ ಹೀಗೆ ಮಾಡಲ್ಲ ಎಂದು ಹೇಳಿಸಿದ್ದಾರೆ.