ನಟ ಸಿದ್ದಾರ್ಥ್ ಮತ್ತು ಅದಿತಿ ರಾವ್ ಹೈದರಿ ತೆಲಂಗಾಣದ ವನಪರ್ಥಿಯಲ್ಲಿರುವ 400 ವರ್ಷಗಳ ಪುರಾತನ ದೇವಸ್ಥಾನದಲ್ಲಿ ಸರಳ ವಿವಾಹದ ಮೂಲಕ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.
ದಂಪತಿ ತಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್ ನಲ್ಲಿ ಮದುವೆ ಫೋಟೊ ಹಂಚಿಕೊಂಡಿದ್ದು, ಮದುವೆ ಸಮಾರಂಭದಲ್ಲಿ ಸ್ನೇಹಿತರು ಮತ್ತು ಕುಟುಂಬ ವರ್ಗದ ಆಪ್ತರು ಮಾತ್ರ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಅದಿತಿ ಚಿನ್ನದ ಬಣ್ಣದ ಸೀರೆ ಧರಿಸಿದ್ದರೆ, ಸಿದ್ದಾರ್ಥ್ ಬಿಳಿ ಕುರ್ತ ಮತ್ತು ಪೈಜಾಮ ಧರಿಸಿದ್ದರು. ಇಬ್ಬರು ಹಸನ್ಮುಖರಾಗಿ ಹಿಂದೂ ಧರ್ಮದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಕಳೆದ ಮಾರ್ಚ್ ನಲ್ಲಿ ಅದಿತಿ ರಾವ್ ಜೊತೆ ನಿಶ್ಚಿತಾರ್ಥ ಆಗಿರುವ ವಿಷಯವನ್ನು ಸಿದ್ಧಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಸಿನಿಮಾ ರಂಗದ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.