ಇಸ್ರೇಲ್ ಹೆಜಾಬುಲ್ಲಾ ನೆಲೆಗಳನ್ನು ಕೇಂದ್ರೀಕರಿಸಿ ಲೆಬೆನಾನ್ ನ ಹಲವೆಡೆ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದ್ದು, ಗಾಯಾಳುಗಳ ಸಂಖ್ಯೆ 1000ಕ್ಕೆ ಜಿಗಿತ ಕಂಡಿದೆ.
ಹೆಜಾಬುಲ್ಲಾ ಮತ್ತು ಇಸ್ರೇಲ್ ನಡುವಿನ ದಾಳಿ- ಪ್ರತಿದಾಳಿಯಲ್ಲಿ ಇಸ್ರೇಲ್ ಲೆಬೆನಾನ್ ಮೇಲೆ 2006ರ ನಂತರ ನಡೆದ ಅತೀ ದೊಡ್ಡ ದಾಳಿಯಾಗಿದೆ.
ಹೆಜಾಬುಲ್ಲಾ ಶಸ್ತ್ರಾಸ್ತ್ರಗಳ ಸಂಗ್ರಹ ಎಂದು ಗುರುತಿಸಿದ ನೆಲೆಗಳನ್ನು ಕೇಂದ್ರೀಕರಿಸಿ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಆದರೆ ಲೆಬೆನಾನ್ ಮುಗ್ಧ ನಾಗರಿಕರನ್ನು ಕೇಂದ್ರೀಕರಿಸಿ ಇಸ್ರೇಲ್ ದಾಳಿ ನಡೆಸಿದ್ದು, ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರಾಗಿದ್ದಾರೆ ಎಂದು ಆರೋಪಿಸಿದೆ.
ಲೆಬೆನಾನ್ ತೊರೆಯುವಂತೆ ಇಸ್ರೇಲ್ ನಿಂದ 80,000ಕ್ಕೂ ಅಧಿಕ ಕರೆಗಳು ಬಂದಿವೆ. ಈ ಕರೆಗಳು ಬಂದ ಬೆನ್ನಲ್ಲೇ ದಕ್ಷಿಣ ಲೆಬೆನಾನ್ ನಲ್ಲಿರುವ ಹೆಜಾಬುಲ್ಲಾದ ನೆಲೆಗಳು ಎಂದು ಗುರುತಿಸಲಾದ ಕಟ್ಟಡಗಳ ಮೇಲೆ ಇಸ್ರೇಲ್ ಭಾರೀ ಪ್ರಮಾಣದಲ್ಲಿ ಬಾಂಬ್ ದಾಳಿ ನಡೆಸಿದೆ.
ಒರೆಗೊ, ಇಮಾದ್, ಕ್ರೇಡಿಹ್ ಸೇರಿದಂತೆ ವಿವಿಧ ಕಂಪನಿಗಳಿಂದ 80 ಸಾವಿರಕ್ಕೂ ಅಧಿಕ ಕರೆಗಳು ಲೆಬೆನಾನ್ ನಿವಾಸಿಗಳಿಗೆ ಕರೆ ಬಂದಿದೆ. ಕೂಡಲೇ ಜಾಗ ತೆರವು ಮಾಡಿ ಎಂದು ಸಲಹೆ ನೀಡಿವೆ ಎಂದು ರಕ್ಷಣಾ ಇಲಾಖೆ ಆರೋಪಿಸಿದೆ.