ಬಾಸ್ಮತಿ ಅಲ್ಲದ ಮೂರು ಮಾದರಿ ಅಕ್ಕಿ ರಫ್ತು ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಶೇ.10ರಷ್ಟು ಕಡಿತಗೊಳಿಸಿದೆ.
ಕೇಂದ್ರ ಹಣಕಾಸು ಸಚಿವಾಲಯ ಭತ್ತ, ಹೊಟ್ಟು ಅಕ್ಕಿ ಮತ್ತು ಬೇಯಿಸಿದ ಅಕ್ಕಿ ಮೇಲಿನ ರಫ್ತು ಸುಂಕವನ್ನು ಶೇ.20ರಿಂದ ಶೇ.10ಕ್ಕೆ ಕಡಿತಗೊಳಿಸಿ ಶನಿವಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ರಫ್ತಿಗೆ ಉತ್ತೇಜನ ನೀಡಿದೆ.
ಬಾಸ್ಮತಿ ಮೇಲಿನ ರಫ್ತು ಸುಂಕವನ್ನು ತೆಗೆದುಹಾಕಿದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಶನಿವಾರ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯ ರಫ್ತು ನೀತಿಯನ್ನು ಪರಿಷ್ಕರಿಸಿದ್ದು, ನಿಷೇಧ ಅಥವಾ “ಉಚಿತ’ದಿಂದ ಮುಕ್ತಿಗೊಳಿಸಿದೆ. ಅಲ್ಲದೇ ಪ್ರತಿ ಟನ್‌ಗೆ 490 ಡಾಲರ್ ಕನಿಷ್ಠ ರಫ್ತು ದರ (MEP) ನಿಗದಿಪಡಿಸಿದೆ.
ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಈ ಕುರಿತು ಶನಿವಾರ ಅಧಿಸೂಚನೆ ಹೊರಡಿಸಿದ್ದು, “HS ಕೋಡ್ 10063090 ಅಡಿಯಲ್ಲಿ ಬಿಳಿ ಅಕ್ಕಿಯಾದ ಸಂಪೂರ್ಣವಾಗಿ ಗಿರಣಿ ಮಾಡಿದ ಅಥವಾ ಪಾಲಿಶ್ ಮಾಡದ ಬಾಸ್ಮತಿ ಅಲ್ಲದ ಅಕ್ಕಿಗೆ ಕನಿಷ್ಠ 490 ಡಾಲರ್ ಪ್ರತಿ ಟನ್ ಗೆ ಕಡಿಮೆ ಆಗದಂತೆ ಮಾರಾಟ ಮಾಡಬಹುದಾಗಿದೆ.