ಲೆಬೆನಾನ್ ಮೇಲೆ ದಾಳಿ ನಡೆಸಿ ಹೆಜಾಬುಲ್ಲಾ ಮುಖ್ಯಸ್ಥನನ್ನು ಹತ್ಯೆಗೈದ ನಂತರ ಇಸ್ರೇಲ್ ಇದೀಗ ಯೆಮೆನ್ ನ ಹೌಥಿ ನೆಲೆಗಳನ್ನು ಕೇಂದ್ರೀಕರಿಸಿ ದಾಳಿ ಆರಂಭಿಸಿದೆ.
ಕಳೆದೆರಡು ದಿನಗಳಿಂದ ಹೌಥಿ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತೀಕಾರವಾಗಿ ಇಸ್ರೇಲ್ ಯೆಮೆನ್ ಮೇಲೆ ಭಾರೀ ಪ್ರಮಾಣದಲ್ಲಿ ಭಾನುವಾರ ದಾಳಿ ನಡೆಸಿದೆ.
ಇರಾಕಿ ಉಗ್ರರ ಜೊತೆ ಕೈಜೋಡಿಸಿರುವ ಇರಾನ್ ನಿಂದ ಹಣಕಾಸು ಬೆಂಬಲ ಪಡೆದಿರುವ ಹೌಥಿ ಉಗ್ರರು ಇಸ್ರೇಲ್ ಮೇಲೆ ಎರಡು ದಿನದಿಂದ ದಾಳಿ ನಡೆಸಿದ್ದರು. ಲೆಬೆನಾನ್ ಹೆಜಾಬುಲ್ಲಾ ದಾಳಿ ಕೇಂದ್ರೀಕರಿಸಿದ್ದ ಇಸ್ರೇಲ್ ಸೇನೆ ಇದೀಗ ಹೌಥಿ ಮೇಲೆ ದಾಳಿ ಆರಂಭಿಸಿದೆ.
ಹೆಜಾಬುಲ್ಲಾ ಮುಖ್ಯಸ್ಥ ಹಸನ್ ನಸ್ರುಲ್ಲಾ ಹತ್ಯೆ ನಂತರ ಇಸ್ರೇಲ್ ಸುಮಾರು 20 ಹೆಜಾಬುಲ್ಲಾ ಉಗ್ರರನ್ನು ಹತ್ಯೆಗೈದಿದ್ದಾಗಿ ಹೇಳಿಕೊಂಡಿದೆ. ನಸ್ರುಲ್ಲಾ ಮೃತದೇಹ ಕೂಡ ಪತ್ತೆಯಾಗಿದೆ ಎಂದು ಸ್ಥಳೀಯ ವೈದ್ಯಕೀಯ ಘಟಕ ಹೇಳಿದೆ.