ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಿನಲ್ಲಿದ್ದ 14 ಸೈಟ್ ಗಳ ಕ್ರಯಪತ್ರ ರದ್ದು ಮಾಡಲಾಗಿದೆ ಎಂದು ಮುಡಾ ಅಧ್ಯಕ್ಷ ರಘು ನಂದನ್ ಘೋಷಿಸಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ವತಿ ಪರವಾಗಿ ಪುತ್ರ ಯತೀಂದ್ರ ಸೈಟ್ ವಾಪಸ್ ಪಡೆಯುವಂತೆ ಪತ್ರ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿಯಮದಂತೆ ಪಾರ್ವತಿ ಅವರಿಗೆ ನೀಡಲಾಗಿದ್ದ 14 ಸೈಟ್ ಗಳ ಕ್ರಯಪತ್ರ ರದ್ದು ಮಾಡುವಂತೆ ಸಬ್ ರಿಜಿಸ್ಟ್ರಾರ್ ಗೆ ಸೂಚಿಸಲಾಗಿದೆ ಎಂದರು.
ಪತಿಯ ರಾಜಕೀಯ ಜೀವನ ಕಳಂಕರಹಿತವಾಗಿದ್ದು, ಸೋದರನಿಂದ ಹರಿಶಿನ-ಕುಂಕುಮಕ್ಕಾಗಿ ನೀಡಲಾದ ಈ ಜಮೀನನ್ನು ಮುಡಾ ಅತಿಕ್ರಮವಾಗಿ ವಶಪಡಿಸಿಕೊಂಡು ಪರಿಹಾರವಾಗಿ ಶೇ.50:50ರ ಅನುಪಾತದಲ್ಲಿ 14 ಸೈಟ್ ನೀಡಿತ್ತು. ನಿಯಮದಂತೆ ಪಡೆಯಲಾದ ಸೈಟ್ ಈಗ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ನನಗೆ ಚಿನ್ನ, ಜಮೀನಿನ ಮೇಲೆ ಯಾವುದೇ ಆಸೆ ಇಲ್ಲ. ಈಗ ನನ್ನ ಪತಿಯ ಘನತೆಗಿಂತ ಸೈಟ್ ಮುಖ್ಯವಲ್ಲ. ಆದ್ದರಿಂದ ಸೈಟು ವಾಪಸ್ ಪಡೆಯಬೇಕು ಎಂದು ಮುಡಾಗೆ ಬರೆದ ಪತ್ರದಲ್ಲಿ ಪಾರ್ವತಿ ಮನವಿ ಮಾಡಿದ್ದರು.