ಶಿಮ್ಲಾದಲ್ಲಿರುವ ವಿವಾದಾತ್ಮಕ 3 ಅಂತಸ್ತಿನ ಮಸೀದಿಯನ್ನು ನೆಲಸಮಗೊಳಿಸಲು ಹಿಮಾಚಲ ಪ್ರದೇಶ ಹೈಕೋರ್ಟ್ ಆದೇಶಿಸಿದೆ.
2 ತಿಂಗಳಲ್ಲಿ ಸಂಜುಲಿ ಮಸೀದಿಯನ್ನು 2 ತಿಂಗಳಲ್ಲಿ ನೆಲಸಮಗೊಳಿಸಬೇಕು ಎಂದು ಶಿಮ್ಲಾ ಮುನ್ಸಿಪಾಲ್ ಕಾರ್ಪೊರೇಷನ್ ನ್ಯಾಯಾಲಯ, ಮಸೀದಿ ಸಮಿತಿ ಹಾಗೂ ವಕ್ಫ್ ಮಂಡಳಿಗೆ ನ್ಯಾಯಾಲಯ ಸೂಚಿಸಿದೆ.
ಮಸೀದಿಯನ್ನು ಅಕ್ರಮ ಜಾಗದಲ್ಲಿ ನಿರ್ಮಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಹಲವಾರು ಬಾರಿ ದೂರು ನೀಡಿದ್ದವು. ಈ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್ ಆದೇಶ ಹೊರಡಿಸಿದ್ದು, ಅಕ್ಟೋಬರ್ 21ಕ್ಕೆ ವಿಚಾರಣೆ ಮುಂದೂಡಿದೆ.
ಅನುಮತಿ ಪಡೆಯದೇ ಮಸೀದಿಯನ್ನು 5 ಅಂತಸ್ತಿಗೆ ವಿಸ್ತರಿಸಲಾಗಿದೆ. 2011ರಲ್ಲಿ ನೋಟಿಸ್ ನೀಡಿದ್ದರೂ ಮಸೀದಿಯ ಅಂತಸ್ತು ಏರಿಕೆ ಮಾಡಲಾಗುತ್ತಿದೆ. ಪ್ರಶ್ನಿಸಿದರೆ ಯಾವುದೇ ದಾಖಲೆ ನೀಡುತ್ತಿಲ್ಲ ಎಂದು ಹಿಂದೂ ಸಂಘಟನೆಗಳ ಪರ ವಕೀಲ ವಾದಿಸಿದ್ದರು.
ಮದೀಸಿಯನ್ನು ಅಕ್ರಮ ಜಾಗದಲ್ಲಿ ನಿರ್ಮಿಸಲಾಗಿದ್ದು, ಮಸೀದಿಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕೆ ಸ್ಥಳೀಯರು ಕೂಡ ಬೆಂಬಲ ನೀಡುತ್ತಿದ್ದಾರೆ ಎಂದು ವಕೀಲರು ವಾದಿಸಿದರು.
ಮಸೀದಿಯನ್ನು ತೆರವುಗೊಳಿಸಬೇಕು ಎಂದು ನಡೆದ ಪ್ರತಿಭಟನೆ ವೇಳೆ 10 ಮಂದಿ ಅಸುನೀಗಿದ್ದರು. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ನಿರ್ಮಿಸಲಾದ 3 ಅಂತಸ್ತನ್ನು ನೆಲಸಮಗೊಳಿಸಲು ಸೂಚಿಸಲಾಗಿದೆ.