Friday, October 18, 2024
Google search engine
Homeಅಪರಾಧಬೆಂಗಳೂರು: ಮಗನ ಸ್ನೇಹಿತನ ಜೊತೆ ಪತ್ನಿ ರಾಸಲೀಲೆ, ಇಬ್ಬರನ್ನೂ ಕೊಂದು ಪತಿ ಆತ್ಮಹತ್ಯೆ

ಬೆಂಗಳೂರು: ಮಗನ ಸ್ನೇಹಿತನ ಜೊತೆ ಪತ್ನಿ ರಾಸಲೀಲೆ, ಇಬ್ಬರನ್ನೂ ಕೊಂದು ಪತಿ ಆತ್ಮಹತ್ಯೆ

ಮಗನ ಸ್ನೇಹಿತನ ಜೊತೆ ರಾಸಲೀಲೆಯಲ್ಲಿ ತೊಡಗಿದ್ದಾಗ ಪತ್ನಿಯನ್ನು ಕಂಡ ಪತಿ ಇಬ್ಬರನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆಂಧ್ರಪ್ರದೇಶದಿಂದ ಗಾರೆ ಕೆಲೆಸಕ್ಕೆಂದು ಬೆಂಗಳೂರಿನ ಆರ್ ಬಿ ಐ ಲೇಔಟ್ ಸಮೀಪದ ಸೋಮೇಶ್ವರ ಬಡಾವಣೆಯಲ್ಲಿ ನಿರ್ಮಾಣ ಹಂತದ ‌ಕಟ್ಟಡದಲ್ಲಿ‌ ವಾಸವಾಗಿದ್ದ ಗೊಲ್ಲಬಾಬು (45) ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಗನ ಸ್ನೇಹಿತ ಗಣೇಶ್ ಕುಮಾರ್ (20) ಮತ್ತು ಪತ್ನಿ ಫೈತಮ್ಮ ಅಲಿಯಾಸ್ ಲಕ್ಷ್ಮೀ (40) ಅವರನ್ನು ಕೊಲೆಗೈದಿದ್ದಾನೆ.

ಬೆಂಗಳೂರಿನಲ್ಲಿ ವಿವಿಧ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಗೊಲ್ಲಬಾಬು ಮತ್ತು ಫೈತಮ್ಮ ದಂಪತಿ ಮಗನೊಂದಿಗೆ ಕೇವಲ 2 ತಿಂಗಳ ಹಿಂದಷ್ಟೇ ಕೊಣನಕುಂಟೆ ನಿರ್ಮಾಣ ಹಂತದ ಕಟ್ಟಡದಲ್ಲಿ ವಾಸವಾಗಿದ್ದರು.

ಇದೇ ಕಟ್ಟಡದ ಇನ್ನೊಂದು ಶೆಡ್‌ನಲ್ಲಿ ವಾಸವಿದ್ದ ಗಣೇಶ ಕುಮಾರ್ ಹೊಸದಾಗಿ ಬಂದ ದಂಪತಿಯ ಮಗನ ಜೊತೆ ಸ್ನೇಹ ಬೆಳೆಸಿದ್ದಾನೆ. ಇಬ್ಬರೂ ಯಾವಾಗಲೂ ಒಟ್ಟಿಗೆ ಇರುತ್ತಿದ್ದರು. ಹೆಚ್ಚು ಆತ್ಮೀಯರಾದಾಗ ತಾಯಿಗೆ ಗಣೇಶನನ್ನು ಮಗ ಪರಿಚಯ ಮಾಡಿಕೊಟ್ಟಿದ್ದಾನೆ.

ಗಣೇಶ ಕುಮಾರ್ ನಂತರ ಪದೇಪದೆ ಮನೆಗೆ ಬರುತ್ತಿದ್ದರಿಂದ ಅಸಮಾಧಾನಗೊಂಡ ತಂದೆ ಗೊಲ್ಲಬಾಬು ಮಗನಿಗೆ ಎಚ್ಚರಿಕೆ ನೀಡಿದ್ದಾರೆ. ಅಪ್ಪನ ಮಾತಿನ ಒಳಮರ್ಮ ಅರ್ಥವಾಗದ ಮಗ ಸ್ನೇಹಿತನನ್ನು ಕರೆದುಕೊಂಡು ಬರುವುದನ್ನು ಮುಂದುವರಿಸಿದ್ದಾನೆ.

ಸ್ನೇಹಿತನ ಅಮ್ಮನ ಮೇಲೆ ಕಣ್ಣು ಹಾಕಿದ್ದ ಗಣೇಶ ಅನೈತಿಕ ಸಂಬಂಧವನ್ನೂ ಬೆಳೆಸಿದ್ದಾನೆ. ಗೊಲ್ಲಬಾಬು ನೀನು ಮನೆಗೆ ಬರಬೇಡ ಎಂದು ನೇರವಾಗಿ ಎಚ್ಚರಿಕೆ ನೀಡಿದರೂ ಗಣೇಶ ಪರಿಗಣಿಸಿಲ್ಲ.

ಗೊಲ್ಲಬಾಬು ಮತ್ತು ಫೈತಮ್ಮ ದಂಪತಿಯ ಮಗ ಎರಡು ದಿನಗಳ ಹಿಂದ ಊರಿಗೆ ಮರಳಿದ್ದಾನೆ. ಈ ವೇಳೆ ಸೀದಾ ಸ್ನೇಹಿತ ಮನೆಗೆ ತೆರಳಿ ಆತನ ಅಮ್ಮನೊಂದಿಗೆ ರತಿಕ್ರೀಡೆಯಲ್ಲಿ ತೊಡಗಿದ್ದಾನೆ. ಈ ಬಗ್ಗೆ ಅನುಮಾನವಿದ್ದ ಗೊಲ್ಲಬಾಬು ಇಬ್ಬರು ಏಕಾಂತದಲ್ಲಿ ಇರುವಾಗಲೇ ಶೆಡ್‌ನೊಳಗೆ ಹೋಗಿ ಇಬ್ಬರನ್ನು ನೋಡಿ ತೀವ್ರ ಕೋಪಗೊಂಡಿದ್ದಾನೆ.

ಇಬ್ಬರನ್ನೂ ಅಲ್ಲಿಯೇ ಇದ್ದ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಟ್ಟಿಗೆಯನ್ನು ಹಿಡಿದು ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ, ನನ್ನ ಕುಟುಂಬವೇ ನಾಶವಾಗಿ ಹೋಯಿತು. ಮರ್ಯಾದೆ ಹೋದಮೇಲೆ ತಾನು ಬದುಕಿದ್ದಾರೂ ಫಲವೇನು ಎಂದು ತಾನು ಕೂಡ ಅದೇ ಕಟ್ಟದ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆಯ ನಂತರ ಮಾಲೀಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಕೋಣನಕುಂಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments