Sunday, November 24, 2024
Google search engine
Homeಅಪರಾಧಗಂಡನ ದೀರ್ಘಾಯಸ್ಸಿಗೆ ವ್ರತ ಆಚರಿಸಿದ ಪತ್ನಿ ವಿಷ ಹಾಕಿ ಕೊಂದೇ ಬಿಟ್ಟಳು!

ಗಂಡನ ದೀರ್ಘಾಯಸ್ಸಿಗೆ ವ್ರತ ಆಚರಿಸಿದ ಪತ್ನಿ ವಿಷ ಹಾಕಿ ಕೊಂದೇ ಬಿಟ್ಟಳು!

ಉತ್ತರ ಭಾರತದಲ್ಲಿ ಆಚರಿಸಲಾಗುವ ಕರ್ವಾ ಚೌತ್ (ಗಂಡನ ಶ್ರೇಯಸ್ಸಿಗಾಗಿ ಉಪವಾಸ) ವ್ರತ ಆಚರಿಸಿದ ಪತ್ನಿ ಗಂಡನಿಗೆ ಆಹಾರದಲ್ಲಿ ವಿಷ ಹಾಕಿ ಕೊಂದ ಘಟನೆ ಉತ್ತರ ಪ್ರದಶದಲ್ಲಿ ನಡೆದಿದೆ.

ಕೌಶಾಂಬಿ ಜಿಲ್ಲೆಯ ಕಾದಾ ಧಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 32 ವರ್ಷದ ಶೈಲೇಶ್ ಕುಮಾರ್ ನನ್ನು ಪತ್ನಿ ಸವಿತಾ ಕರ್ವಾ ಚೌತ್ ವ್ರತ ಆಚರಿಸಿದ ನೆಪದಲ್ಲಿ ಊಟದಲ್ಲಿ ವಿಷ ಹಾಕಿ ಹತ್ಯೆ ಮಾಡಿದ್ದಾಳೆ.

ಸವಿತಾಗೆ ಅನೈತಿಕ ಸಂಬಂಧ ಇದ್ದು, ಗಂಡನ ದೀರ್ಘಾಯಸ್ಸಿಗಾಗಿ ಕರ್ವಾ ಚೌತ್ ವ್ರತ ಆಚರಿಸುತ್ತಿರುವುದಾಗಿ ಹೇಳಿಕೊಂಡಿದ್ದಳು. ಭಾನುವಾರ ಇಡೀ ದಿನ ಉಪವಾಸವಿದ್ದ ಸವಿತಾ ಮತ್ತು ಶೈಲೇಶ್ ನಡುವೆ ವಾಗ್ವಾದ ಆಗಿದ್ದು, ನಂತರ ಹಬ್ಬದ ನೆಪದಲ್ಲಿ ಸುಮ್ಮನಾಗಿದ್ದಾರೆ.

ಗಂಡ-ಹೆಂಡತಿ ಇಬ್ಬರೂ ಒಟ್ಟಿಗೆ ಊಟ ಮಾಡಿದ್ದಾರೆ. ನಂತರ ಪಕ್ಕದ ಮನೆಗೆ ಹೋಗಿ ಬರುತ್ತೇನೆ ಎಂದು ಸವಿತಾ ಹೋದವಳು ನಾಪತ್ತೆಯಾಗಿದ್ದಾಳೆ. ಈ ವೇಳೆ ಶೈಲೇಶ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಕೂಡಲೇ ಆಸ್ಪತ್ರೆಗೆ ಸೋದರ ಅಖಿಲೇಶ್ ಸಾಗಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಆಹಾರದಲ್ಲಿ ವಿಷ ಹಾಕಲಾಗಿದೆ ಎಂದು ಹೇಳಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶೈಲೇಶ್ ಮೃತಪಟ್ಟಿದ್ದು, ಪೊಲೀಸರು ಸವಿತಾಳನ್ನು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments