ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆಯುರ್ವೇದ ದಿನಾಚರಣೆಯ ಅಂಗವಾಗಿ ಆರೋಗ್ಯ ವಿಮೆ ಸೇರಿದಂತೆ 12,850 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ವೈದ್ಯಕೀಯ ಪದ್ಧತಿಯ ಪಿತಾಮಹ ಎಂದು ಹೇಳಲಾಗುವ ಧನವಂತ್ರಿ ದಿನಾಚರಣೆ ಪ್ರಯಕ್ತ ಆಯುರ್ವೆದ ದಿನ ಪ್ರತಿ ವರ್ಷ ಅಕ್ಟೋಬರ್ 29ರಂದು ಆಚರಿಸಲಾಗುತ್ತಿದೆ. ಆಯುರ್ವೆದ ದಿನಾಚರಣೆಯಂದು ಕೇಂದ್ರ ಸರ್ಕಾರ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗಾಗಿ ಘೋಷಿಸಿರುವ ಆಯುಷ್ಮಾನ್ ಭಾರತ್ ಯೋಜನೆಗೆ ಚಾಲೆ ನೀಡಲಾಗುತ್ತಿದೆ.
ಇದೇ ವೇಳೆ ರೋಜ್ ಗರ್ ಮೇಳದ ಅಂಗವಾಗಿ 51 ಸಾವಿರ ಯುವಕರಿಗೆ ನೇಮಕಾತಿ ಪತ್ರವನ್ನು ಪ್ರಧಾನಿ ಹಸ್ತಾಂತರಿಸಲಿದ್ದಾರೆ. ಇದೇ ವೇಳೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಘೋಷಿಸಲಿದ್ದಾರೆ ಹಾಗೂ ದೇಶದ ಮೊದಲ ಆಯುರ್ವೆದ ಇನ್ಸಿಟಿಟ್ಯೂಟ್ ನ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಮಧ್ಯಪ್ರದೇಶದ ಮಂದಸೌರ್, ನೀಮುಚ್ ಮತ್ತು ಸಿಯೋನಿಯಲ್ಲಿ ಮೂರು ವೈದ್ಯಕೀಯ ಕಾಲೇಜುಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.
ಹಿಮಾಚಲ ಪ್ರದೇಶದ ಬಿಲಾಸ್‌ಪುರ, ಪಶ್ಚಿಮ ಬಂಗಾಳದ ಕಲ್ಯಾಣಿ, ಬಿಹಾರದ ಪಾಟ್ನಾ, ಉತ್ತರ ಪ್ರದೇಶದ ಗೋರಖ್‌ಪುರ, ಮಧ್ಯಪ್ರದೇಶದ ಭೋಪಾಲ್, ಅಸ್ಸಾಂನ ಗುವಾಹಟಿ ಮತ್ತು ದೆಹಲಿಯ ವಿವಿಧ ಏಮ್ಸ್ ಗಳಲ್ಲಿ ಜನೌಷಧಿ ಕೇಂದ್ರವನ್ನೂ ಒಳಗೊಂಡ ಸೌಲಭ್ಯ ಮತ್ತು ಸೇವಾ ವಿಸ್ತರಣೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.
ಮಧ್ಯಪ್ರದೇಶದ ಶಿವಪುರಿ, ರತ್ಲಂ, ಖಾಂಡ್ವಾ, ರಾಜ್‌ಗಢ ಮತ್ತು ಮಂದಸೌರ್‌ನಲ್ಲಿ ಐದು ನರ್ಸಿಂಗ್ ಕಾಲೇಜುಗಳು, ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್ ಅಡಿಯಲ್ಲಿ ಹಿಮಾಚಲ ಪ್ರದೇಶ, ಕರ್ನಾಟಕ, ಮಣಿಪುರ, ತಮಿಳುನಾಡು ಮತ್ತು ರಾಜಸ್ಥಾನದಲ್ಲಿ 21 ಕ್ರಿಟಿಕಲ್ ಕೇರ್ ಬ್ಲಾಕ್‌ಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಮತ್ತು ದೆಹಲಿಯ ಏಮ್ಸ್ ನಲ್ಲಿ ಮತ್ತು ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ ಹಲವಾರು ಸೌಲಭ್ಯಗಳು ಮತ್ತು ಸೇವಾ ಸೌಲಭ್ಯಗಳಿಗೆ ಚಾಲನೆ ನೀಡಲಿದ್ದಾರೆ.