ಹಿರಿಯರ ಕಾಡಿಕೆ (ಪಿತೃ ದೋಷ) ಪರಿಹರಿಸುವ ಹೆಸರಿನಲ್ಲಿ ಅಮಾಯಕರನ್ನ ವಂಚಿಸುತ್ತಿದ್ದ ನಕಲಿ ಸ್ವಾಮೀಜಿ ಸೇರಿದಂಥೆ 5 ಜನರ ಗ್ಯಾಂಗ್ ಅನ್ನು ಹಿಡಿದ ಸಾರ್ವಜನಿಕರು ಯಾದಿಗಿರಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸುರಪುರ ತಾಲೂಕಿನ ಮಂಜಲಾಪುರ ಗ್ರಾಮದಲ್ಲಿ ಸ್ವಾಮೀಜಿ ವೇಷ ಧರಿಸಿದ್ದ ವ್ಯಕ್ತಿ ಜೊತೆ ಗ್ಯಾಂಗ್ ನ 5 ಮಂದಿಯನ್ನು ಸಾರ್ವಜನಿಕರು ಹಿಡಿದಿದ್ದು, ಮೂವರು ಪರಾರಿಯಾಗಿದ್ದಾರೆ.
ಪಿತೃದಳ ದೋಷ ನಿವಾರಣೆ ಮಾಡುತ್ತೇವೆ ಅಂತ 10 ರಿಂದ 20 ಸಾವಿರ ರೂ. ನಂತರ ಹಲವಾರು ಜನರಿಗೆ ಈ ಗ್ಯಾಂಗ್ ವಂಚಿಸಿತ್ತು.
ಕೊಡೇಕಲ್ ಪೋಲಿಸ್ ಠಾಣಾ ವ್ಯಾಪ್ತಿಯ ಗ್ರಾಮಕ್ಕೆ ಭೇಟಿ ನೀಡಿದ್ದ ಐದು ಜನರ ಗ್ಯಾಂಗ್ ಹಲವು ಮನೆಗಳಿಗೆ ತೆರಳಿ ನಿಮಗೆ ಹಿರಿಯರ ಕಾಡಿಕೆ ಇದೆ ಅದನ್ನು ನಾವು ಬಗೆಹರಿಸುತ್ತೇವೆ ಎಂದು ನಂಬಿಸಿದ್ದಾರೆ. ಗ್ರಾಮದ ಮಹಿಳೆಯರಿಗೆ ಲಿಂಬೆಹಣ್ಣು, ದೇವರ ಆಧಾರ ಕೊಟ್ಟು ಸಾವಿರಾರು ರೂಪಾಯಿ ವಂಚಿಸಿದ್ದಾರೆ.
ಕೇಳಿದಷ್ಟು ಹಣ ಕೊಟ್ಟು ಮಹಿಳೆಯರು ಕಂಗಾಲಾಗಿದ್ದಾರೆ. ನಂತರ ಸಂಶಯ ಬಂದು ಮೂರು ಜನರನ್ನು ಯುವಕರು ಹಿಡಿದಿದ್ದಾರೆ. ಇಬ್ಬರು ಎಸ್ಕೇಪ್ ಆಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಕೊಡೇಕಲ್ ಪೋಲಿಸರು ಮೂರು ಜನರು ಮತ್ತು ಅವರ ಬಳಿಯಿದ್ದ 23 ಸಾವಿರ ರೂ. ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ನಮ್ಮ ಹಣ ವಾಪಸ್ ಕೊಡುವಂತೆ ಮಹಿಳೆಯರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಮಹಿಳೆಯರಿಗೆ ಪೋಲಿಸರು ಹಣ ವಾಪಸ್ ಕೊಡಿಸಿದ್ದಾರೆ.