ಐಪಿಎಲ್ ಟಿ-20 ಟೂರ್ನಿಯ ನಿಯಮದಲ್ಲಿ ಹಲವು ಬದಲಾವಣೆ ಮಾಡಲಾಗಿದ್ದು, ಆಟಗಾರರು ಗುತ್ತಿಗೆ ಒಪ್ಪಂದದ ಜೊತೆ ಹೆಚ್ಚುವರಿಯಾಗಿ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ. ಸಂಪಾದಿಸಲಿದ್ದಾರೆ.
ಐಪಿಎಲ್ ಆಡಳಿತ ಮಂಡಳಿ ಐಪಿಎಲ್ ನಲ್ಲಿ ಆಡಲಿರುವ ಇಂಪ್ಯಾಕ್ಟ್ ಆಟಗಾರ ಸೇರಿದಂತೆ ಮೈದಾನಲ್ಕಿಳಿಯುವ ಎಲ್ಲಾ ಆಟಗಾರರಿಗೆ ತಲಾ 7.5 ಲಕ್ಷ ರೂ. ಪಂದ್ಯ ಶುಲ್ಕ ಪಡೆಯಲಿದ್ದಾರೆ.
ಆಟಗಾರರು ಹರಾಜಿನಲ್ಲಿ ಅಥವಾ ಗುತ್ತಿಗೆ ಒಪ್ಪಂದದಂತೆ ಪಡೆಯುವ ಮೊತ್ತ ಅಲ್ಲದೇ ಪಂದ್ಯದಲ್ಲಿ ಆಡಿದ್ದಕ್ಕಾಗಿ 7.5 ಲಕ್ಷ ರೂ. ಹೆಚ್ಚವರಿಯಾಗಿ ಪಡೆಯಲಿದ್ದಾರೆ.
ಆಟಗಾರರನ್ನು ಉಳಿಸಿಕೊಳ್ಳುವ ಮೊತ್ತದಲ್ಲೂ ಕಡಿತ ಮಾಡಲಾಗಿದೆ. ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದ್ದು, ಇದರಲ್ಲಿ ಗರಿಷ್ಠ 5 ಆಟಗಾರರು ಅಂತಾರಾಷ್ಟ್ರೀಯ ಪಂದ್ಯ ಆಡಿದವರು ಮತ್ತು ಗರಿಷ್ಠ ಇಬ್ಬರು ಅಂತಾರಾಷ್ಟ್ರೀಯ ಪಂದ್ಯ ಆಡದೇ ಇರುವವರು ಆಗಿರಬೇಕು.
ಮೊದಲ ಆಯ್ಕೆ ಆಟಗಾರ ಉಳಿಸಿಕೊಳ್ಳಲು 18 ಕೋಟಿ, ಎರಡನೇ ಆಯ್ಕೆಯ ಆಟಗಾರನಿಗೆ 14 ಕೋಟಿ ಮತ್ತು 3ನೇ ಆಯ್ಕೆಯ ಆಟಗಾರನಿಗೆ 12 ಕೋಟಿ ರೂ.ಗೆ ಮೀಸಲಿಡಲಾಗಿದೆ. ಅಂತಾರಾಷ್ಟ್ರೀಯ ಪಂದ್ಯ ಆಡದ ಆಟಗಾರನಿಗೆ 4 ಕೋಟಿ ರೂ. ವಿನಿಯೋಗಿಸಬಹುದಾಗಿದೆ.
ಇದೇ ವೇಳೆ ಫ್ರಾಂಚೈಸಿಗಳ ಮೊತ್ತದಲ್ಲೂ 20 ಕೋಟಿ ರೂ. ಏರಿಕೆ ಮಾಡಲಾಗಿದೆ. ಅಲ್ಲದೇ ವಿದೇಶೀ ಆಟಗಾರರಿಗೆ ಗರಿಷ್ಠ 18 ಕೋಟಿ ರೂ.ಗೆ ಸೀಮಿತಗೊಳಿಸಲಾಗಿದೆ.
ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಸ್ಟಾರ್ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶರ್ಮ, ಕೆಎಲ್ ರಾಹುಲ್, ರಿಷಭ್ ಪಂತ್ ಮುಂತಾದವರು ಪ್ರಮು ಆಕರ್ಷಣೆ ಆಗಲಿದ್ದಾರೆ.