ರಷ್ಯಾಗೆ ಬೆಂಬಲ ನೀಡಿ 10,000 ಯೋಧರ ಪಡೆ ಕಳುಹಿಸಲು ಸಿದ್ಧತೆ ನಡೆಸಿರುವ ಬೆನ್ನಲ್ಲೇ ಉತ್ತರ ಕೊರಿಯಾ ದೂರಗಾಮಿ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಿದೆ.
ಪೂರ್ವ ಸಮುದ್ರದಲ್ಲಿ ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ ಎಂದು ಸಿಯೊಲ್ ವಿಭಾಗದ ಮುಖ್ಯಸ್ಥರು ಘೋಷಿಸಿದ್ದಾರೆ.
ಜಪಾನ್ ಗೆ ಸಮುದ್ರ ಹೊಂದಿಕೊಂಡಿರುವ ಕಾರಣ ಖಂಡಾಂತರ ಕ್ಷಿಪಣಿ ಪರೀಕ್ಷೆಯ ಮಾಹಿತಿ ಅವರಿಗೂ ಲಭಿಸಿರುತ್ತದೆ. ಇದು ಅತ್ಯಂತ ದೂರ ಮತ್ತು ನಿಖರ ಗುರಿ ತಲುಪುವ ಅತ್ಯಂತ ಶಕ್ತಿಶಾಲಿ ಕ್ಷಿಪಣಿ ಇದಾಗಿದೆ ಎಂದು ಹೇಳಿಕೊಂಡಿದೆ.
ಇದೇ ವೇಳೆ ರಷ್ಯಾಗೆ ಬೆಂಬಲ ವ್ಯಕ್ಯಪಡಿಸಿರುವ ಉತ್ತರ ಕೊರಿಯಾ, ಉಕ್ರೇನ್ ಪ್ರವೇಶಿಸಲು 10,000 ಯೋಧರನ್ನು ಸಜ್ಜುಗೊಳಿಸಿದೆ.
ಇದೇ ವೇಳೆ ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧದಲ್ಲಿ ಉತ್ತರ ಕೊರಿಯಾ ಮಧ್ಯಪ್ರವೇಶಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಉಕ್ರೇನ್ ಪ್ರವೇಶಿಸಿದ ಯೋಧರು ಶವದ ಚೀಲದಲ್ಲಿ ಮರಳಬೇಲಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.