Monday, November 25, 2024
Google search engine
Homeತಾಜಾ ಸುದ್ದಿಮಕ್ಕಳೇ ಹುಷಾರು: ಬೆಂಗಳೂರಿನಲ್ಲಿ ಪಟಾಕಿ ಹೊಡೆಯುವಾಗ 29 ಮಕ್ಕಳ ಕಣ್ಣಿಗೆ ಗಾಯ!

ಮಕ್ಕಳೇ ಹುಷಾರು: ಬೆಂಗಳೂರಿನಲ್ಲಿ ಪಟಾಕಿ ಹೊಡೆಯುವಾಗ 29 ಮಕ್ಕಳ ಕಣ್ಣಿಗೆ ಗಾಯ!

ಪಟಾಕಿ ಹೊಡೆಯುವಾಗ ಸಂಭವಿಸಿದ ಅವಘಡಗಳಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡ 29 ಮಕ್ಕಳು ಬೆಂಗಳೂರಿನ ಮಿಂಟೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಿಂಟೋ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 15 ಪ್ರಕರಣ ದಾಖಲಾಗಿದ್ದು, ಒಟ್ಟು 29 ಜನ ಚಿಕಿತ್ಸೆ ಪಡೆದಿದ್ದಾರೆ. ಈಗಾಗಲೇ 8 ಮಂದಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಇನ್ನುಳಿದ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯಸ್ಕರು 9 ಜನ ಸೇರಿದಂತೆ 9 ಮಕ್ಕಳು, ಅಕ್ಕಪಕ್ಕ ಇದ್ದ 8 ಜನ, ಪಟಾಕಿ ಹಚ್ಚಿದ 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರಿಗೆ ಸರ್ಜರಿ ಮಾಡಲಾಗಿದೆ.

ಮಿಂಟೋ ಆಸ್ಪತ್ರೆಯಲ್ಲಿ 29 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 14 ಜನರಿಗೆ ಗಂಭೀರ ಗಾಯ, 15 ಮಂದಿಗೆ ಸಣ್ಣ ಪುಟ್ಟ ಗಾಯಗೊಂಡಿದ್ದರು. ಕಣ್ಣಿಗೆ ಗಂಭೀರ ಗಾಯಗೊಂಡಿದ್ದ ನಾಲ್ವರಿಗೆ ಆಪರೇಷನ್ ಮಾಡಲಾಗಿದೆ.

ಬೆಂಗಳೂರಿನ ಉತ್ತರದಲ್ಲಿ 9 ದಕ್ಷಿಣದಲ್ಲಿ 4 ಪೂರ್ವದಲ್ಲಿ 6 ಈಶಾನ್ಯದಲ್ಲಿ 19 ಆಗ್ನೇಯ ಮತ್ತು ವೈಟ್‌ಫೀಲ್ಡ್ ನಲ್ಲಿ 9 ಪ್ರಕರಣಗಳು ದಾಖಲಾಗಿದ್ದು, ಬಿಜ್ಲಿ ಪಟಾಕಿ- 8 ಫ್ಲವರ್ ಪಾಟ್ – 4 ಲಕ್ಷ್ಮಿ ಪಟಾಕಿ- 2 ಸ್ಕೈ ಶಾಟ್ ರಾಕೆಟ್-1 ಇನ್ಸೆನ್ಸ್ ಸ್ಟಿಲ್-1 ಬೆಳ್ಳುಳ್ಳಿ ಪಟಾಕಿ-1 ಆಟೋಂಬಾಂಬ್-1 ಡಬಲ್ ಶಾಟ್-1 ಭೂ ಚಕ್ರ-1 ರಾಕೆಟ್-1 ಸ್ಫೋಟಿಸುವ ವೇಳೆ ಮಕ್ಕಳು ಗಾಯಗೊಂಡಿದ್ದಾರೆ.

ಅನಧಿಕೃತವಾಗಿ ಅಂಗಡಿ ತೆರೆದು ಅಕ್ರಮವಾಗಿ ಪಟಾಕಿ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಸಂಜೆಯವರೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು ಒಟ್ಟು 56 ಪ್ರಕರಣಗಳನ್ನು ದಾಖಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments