ಕೇಂದ್ರ ಸಚಿವ ಅಮಿತ್ ಶಾ ದೇಶದಲ್ಲಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದ್ದಾರೆ ಎಂದು ಕೆನಡಾ ಸಚಿವ ಗಂಭೀರ ಆರೋಪ ಮಾಡಿದ್ದಾರೆ.
ಕೆನಡಾ ಸಚಿವರ ಗಂಭೀರ ಆರೋಪವನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸರ್ಕಾರ ಇದೊಂದು ಆಧಾರರಹಿತ ಹಾಗೂ ಶುದ್ಧ ಸುಳ್ಳು ಎಂದು ಪ್ರತಿಕ್ರಿಯಿಸಿದ್ದು, ಕೆನಡಾದ ರಾಯಭಾರಿಗೆ ನೋಟಿಸ್ ಜಾರಿ ಮಾಡಿದೆ.
ಕೆನಡಾದ ವಿದೇಶಾಂಗ ಸಚಿವಾಲಯದ ಉಪ ಸಚಿವ ಡೇವಿಡ್ ಮಾರಿಸನ್ ಮಂಗಳವಾರ ನಡೆದ ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಸುರಕ್ಷತೆ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದಾಗ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದರು.
ಭಾರತದ ಕೇಂದ್ರ ಸಚಿವರ ವಿರುದ್ಧ ಆಧಾರ ರಹಿತ ಹಾಗೂ ಸುಳ್ಳು ಆರೋಪ ಮಾಡಲಾಗಿದೆ. ಇದು ಜಾಗತಿಕ ಮಟ್ಟದಲ್ಲಿ ದೇಶದ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಾಗಿದೆ. ಇದರಿಂದ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಮಸ್ಯೆ ಉಲ್ಭಣಿಸಬಹುದು ಎಂದು ಖಂಡಿಸಿರುವ ಕೇಂದ್ರ ಸರ್ಕಾರ ಕೆನಡಾದ ರಾಯಭಾರಿಗೆ ನೋಟಿಸ್ ಕಳುಹಿಸಿದೆ.