Home ಕ್ರೀಡೆ ರಾಜ್ಯದ ಕ್ರೀಡಾಪಟುಗಳಿಗೆ ಸಿಹಿಸುದ್ದಿ: ಗ್ರೇಸ್ ಮಾರ್ಕ್ಸ್ ನೀಡಲು ಸರ್ಕಾರ ಚಿಂತನೆ

ರಾಜ್ಯದ ಕ್ರೀಡಾಪಟುಗಳಿಗೆ ಸಿಹಿಸುದ್ದಿ: ಗ್ರೇಸ್ ಮಾರ್ಕ್ಸ್ ನೀಡಲು ಸರ್ಕಾರ ಚಿಂತನೆ

by Editor
0 comments
siddaraimah

ರಾಜ್ಯಮಟ್ಟದ ಕ್ರೀಡಾಪಟುಗಳಿಗೆ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡಲು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.  ಈ ಮೂಲಕ ರಾಜ್ಯದ ಕ್ರೀಡಾಪಟುಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಆರಂಭಗೊಂಡ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಉತ್ತೇಜನ ನೀಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ನೀಡಲು ಚಿಂತನೆ ನಡೆಸಲಾಗಿದೆ. ಇದರಿಂದ ಕ್ರೀಡಾಪಟುಗಳಿಗೆ ಕಡಿಮೆ ಅಂಕದ ಭೀತಿ ದೂರ ಮಾಡುವ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದರು.

ರಾಜ್ಯದ ಕ್ರೀಡಾಪಟುಗಳು ಕಾಮನ್ ವೆಲ್ತ್, ಒಲಿಂಪಿಕ್ಸ್ ನಂತಹ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತಾಗಬೇಕು. ಈಗಾಗಲೇ ಸರ್ಕಾರ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತರಿಗೆ ೫ ಕೋಟಿ ರೂ. ಹಾಗೂ ಬೆಳ್ಳಿ ಪದಕ ವಿಜೇತರಿಗೆ ೩ ಕೋಟಿ ರೂ. ಬಹುಮಾನ ಘೋಷಿಸಲಾಗಿದೆ ಎಂದು ಅವರು ವಿವರಿಸಿದರು.

banner

ಕ್ರೀಡಾಪಟುಗಳಿಗೆ ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಶೇ.೩ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಅಲ್ಲದೇ ಶೇ.೨ರಷ್ಟು ಇತರೆ ಇಲಾಖೆಗಳಲ್ಲಿ ಮೀಸಲು ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ಕ್ರೀಡಾಪಟುಗಳು ಪಡೆಯಬೇಕು ಎಂದು ಸಿದ್ದರಾಮಯ್ಯ ಹೇಳಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಬೀಡಾಡಿ ಹಸುಗಳ ಕುತ್ತಿಗೆಗೆ ಬೆಳಕಿನ ಪಟ್ಟಿ: ಯುಪಿಯಲ್ಲಿ ವಿನೂತನ ಪ್ರಯೋಗ! Bigg Boss 11 ಟಿಆರ್ ಪಿಯಲ್ಲಿ ಬಿಗ್ ಬಾಸ್ ಹೊಸ ದಾಖಲೆ: ಸುದೀಪ್ ಕೊಟ್ಟ ವಿವರ ಏನು? ಚಿಕ್ಕಮಗಳೂರು: ಇಬ್ಬರು ಮಕ್ಕಳ ಎದುರೇ ಪ್ರಿಯಕರನಿಂದ ಕೊಲೆಯಾದ ಗೃಹಿಣಿ! ಬಂಡುಕೋರರ ವಶಕ್ಕೆ ಡಾಮಸ್ಕೊ: ಸಿರಿಯಾ ಅಧ್ಯಕ್ಷ ಅಸ್ಸಾದ್ ಪರಾರಿ! 2ನೇ ಟೆಸ್ಟ್: ಆಸ್ಟ್ರೇಲಿಯಾ 10 ವಿಕೆಟ್ ಜಯಭೇರಿ, ಸರಣಿ 1-1ರಿಂದ ಸಮ ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಸುಭಾಷ್ ಘಾಯ್ ಆಸ್ಪತ್ರೆಗೆ ದಾಖಲು! ಶೋಕಾಸ್ ನೋಟಿಸ್‍ಗೆ ಯತ್ನಾಳ್ ಉತ್ತರ ಗಮನಿಸಿ ಮುಂದಿನ ನಿರ್ಧಾರ: ರಾಧಾಮೋಹನ್ ದಾಸ್ ಅಗ್ರವಾಲ್ ಕಿದ್ವಾಯಿಯಲ್ಲಿ ಒಂದೇ 24 ಲಕ್ಷ ಆರ್ ಟಿಪಿಸಿಆರ್ ಪರೀಕ್ಷೆ, 146 ಕೋಟಿ ಬಿಲ್: ಡಿಸಿಎಂ ಡಿಕೆ ಶಿವಕುಮಾರ್ ಶ್ರೀರಂಗ ಕುಡಿಯವ ನೀರು ಪೂರೈಸುವ ಯೋಜನೆ 2026ಕ್ಕೆ ಪೂರ್ಣ: ರಾಜ್ಯ ಸರ್ಕಾರ 2ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಭಾರತ