Thursday, November 14, 2024
Google search engine
Homeಆರೋಗ್ಯಕೇರಳದ ತಿಂಡಿಗಳು ಅಪಾಯಕಾರಿ: ಮಿಕ್ಸರ್, ಖಾರಾ, ಡ್ರೈಫೂಟ್ಸ್ ಸೇರಿ 31 ಪದಾರ್ಥಗಳಲ್ಲಿ ಕೃತಕ ಬಣ್ಣ ಪತ್ತೆ!

ಕೇರಳದ ತಿಂಡಿಗಳು ಅಪಾಯಕಾರಿ: ಮಿಕ್ಸರ್, ಖಾರಾ, ಡ್ರೈಫೂಟ್ಸ್ ಸೇರಿ 31 ಪದಾರ್ಥಗಳಲ್ಲಿ ಕೃತಕ ಬಣ್ಣ ಪತ್ತೆ!

ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಕೇರಳದಿಂದ ಬರುವ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣ ಪತ್ತೆಯಾಗಿದ್ದು, ಇವು ಮನುಷ್ಯರ ಆರೋಗ್ಯಕ್ಕೆ ಅಪಾಯಕಾರಿ ಎಂದು ರಾಜ್ಯ ಆಹಾರ ಇಲಾಖೆ ತಿಳಿಸಿದೆ.

ದೀಪಾವಳಿ ಪ್ರಯುಕ್ತ ಬೆಂಗಳೂರಿಗೆ ಬಂದ ತಿಂಡಿಗಳು ಸೇರಿದಂತೆ ಕೇರಳದಿಂದ ತರಿಸಲಾಗುವ 31 ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಸಿರುವುದು ದೃಢಪಟ್ಟಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ನಾನಾ ಕಡೆ ಮಾರಾಟ ಮಾಡಲಾಗುವ ಕೇರಳದಿಂದ ಬಂದ ಖಾರಾ ಮಿಕ್ಸ್ಚರ್, ಚಿಪ್ಸ್, ಹಲ್ವಾ, ಮುರುಕು, ರಸ್ಕ್, ಡ್ರೈಫ್ರೂಟ್ಸ್ ಸೇರಿದಂತೆ 31 ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಸಿರುವುದು ದೃಢಪಟ್ಟಿದೆ. ಈ ತಿಂಡಿಗಳಲ್ಲಿ ಅಲೌರಾ ರೆಡ್, ಟಾರ್ಟಜೈನ್, ಸನ್ ಸೆಟ್ ಯೆಲ್ಲೋ ಸೇರಿದಂತೆ ಅಪಾಯಕಾರಿ ಕೃತಕ ಬಣ್ಣಗಳು ಲ್ಯಾಬ್ ಪರಿಶೀಲನೆ ವೇಳೆ ದೃಢಪಟ್ಟಿದೆ.

ರಾಜ್ಯಆರೋಗ್ಯ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆ ಪ್ರತಿ ತಿಂಗಳು ಆಹಾರ ಪದಾರ್ಥಗಳ ಗುಣಮಟ್ಟ ಕುರಿತು ಪದೇಪದೇ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದು, ಗೋಬಿ ಮಂಚೂರಿ, ಪಾನಿಪುರಿ, ಕಾಟನ್ ಕ್ಯಾಂಡಿ, ಕಬಾಬ್. ಕೇಕ್ ಮುಂತಾದ ಆಹಾರ ಪದಾರ್ಥಗಳಲ್ಲಿ ಹಾನಿಕಾರಕ ಕೃತಕ ಬಣ್ಣ ಬಳಸುವವರ ವಿರುದ್ಧ ಕ್ರಮಕೈಗೊಂಡಿದೆ.

ಕೃತ ಬಣ್ಣಗಳ ಬಳಕೆ, ರಾಸಾಯನಿಕ ಮಿಶ್ರಣ, ರುಚ್ಚಿ ಹೆಚ್ಚಿಸುವಂತಹ ವಸ್ತುಗಳ ಬಳಕೆ ಮಾಡುವ ಆಹಾರಗಳನ್ನು ಸೇವಿಸಿದರೆ ಅವುಗಳಿಇಂದ ಅನಾರೋಗ್ಯಕ್ಕೆ ತುತ್ತಾಗುವುದು ಖಂಡಿತ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆ ಬೆಂಗಳೂರಿನಾದ್ಯಂತ ಕಾರ್ಯಾಚರಣೆ ಕೈಗೊಂಡು ಇಂತಹ ಅಪಾಯಕಾರು ವಸ್ತುಗಳನ್ನು ಪತ್ತೆಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments