Wednesday, October 23, 2024
Google search engine
Homeಆರೋಗ್ಯನೆಸ್ಟ್ಲೆ ಕಂಪನಿಯ ಮಕ್ಕಳ ಆಹಾರ ಉತ್ಪನ್ನಗಳಲ್ಲಿ 3 ಗ್ರಾಂ ಸಕ್ಕರೆ ಹೆಚ್ಚು: ಸಮೀಕ್ಷೆ ವರದಿ

ನೆಸ್ಟ್ಲೆ ಕಂಪನಿಯ ಮಕ್ಕಳ ಆಹಾರ ಉತ್ಪನ್ನಗಳಲ್ಲಿ 3 ಗ್ರಾಂ ಸಕ್ಕರೆ ಹೆಚ್ಚು: ಸಮೀಕ್ಷೆ ವರದಿ

ದೇಶದಲ್ಲಿ ಮಕ್ಕಳ ಆಹಾರ ಉತ್ಪನ್ನ ದಿಗ್ಗಜ ಸಂಸ್ಥೆಯಾದ ನೆಸ್ಟ್ಲೆ ಉತ್ಪನ್ನಗಳಲ್ಲಿ ಸಕ್ಕರೆ ಅಂಶ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿದೆ ಎಂದು ಸಮೀಕ್ಷೆಯೊಂದು ಆಘಾತಕಾರಿ ವರದಿ ನೀಡಿದೆ.

ಪಬ್ಲಿಕ್ ಐ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಆಘಾತಕಾರಿ ವಿಷಯ ಹೊರಗೆ ಬಂದಿದ್ದು, ಭಾರತದಲ್ಲಿ ಮಾರಾಟವಾಗುವ ಮಕ್ಕಳ ಆಹಾರ ಉತ್ಪನ್ನಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದರೆ, ಅಭಿವೃದ್ಧಿ ಹೊಂದಿದ ದೇಶಗಳಾದ ಬ್ರಿಟನ್, ಜರ್ಮನಿ, ಅಮೆರಿಕ, ಸ್ವಿಡ್ಜರ್ ಲ್ಯಾಂಡ್ ಮುಂತಾದ ದೇಶಗಳಲ್ಲಿ ಸಕ್ಕರೆ ಮುಕ್ತವಾಗಿದೆ ಎಂದು ತಿಳಿಸಿದೆ.

ಮಕ್ಕಳ ಆಹಾರ ಉತ್ಪನ್ನಗಳಲ್ಲಿ ಜಗತ್ತಿನ ಅತೀ ದೊಡ್ಡ ಕಂಪನಿಯಾಗಿರುವ ನೆಸ್ಟ್ಲೆ ಶಿಶು ಹಾಲು ಮತ್ತು ಪ್ರೊಟಿನ್ ಸೇರಿದಂತೆ 15 ವಿವಿಧ ರೀತಿಯ ಉತ್ಪನ್ನಗಳಲ್ಲಿ ಸಿರಾಲ್ಯಾಕ್ ಅಂಶ ಬಳಸುತ್ತಿದೆ. ಇದು ಸಕ್ಕರೆ ಅಥವಾ ಜೇನುತುಪ್ಪ ಮಾದರಿ ಹೊಂದಿದ್ದು, ಪ್ರತೀ ಉತ್ಪನ್ನಗಳಲ್ಲಿ ಕನಿಷ್ಠ 3 ಗ್ರಾಂ ಸಕ್ಕರೆ ಅಂಶ ಕಂಡು ಬರುತ್ತಿದೆ.

ಸಕ್ಕರೆ ಅಂಶ ಬಳಸುವುದು ಅಂತಾರಾಷ್ಟ್ರೀಯ ಆಹಾರ ಉತ್ಪನ್ನಗಳ ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಬೊಜ್ಜು ಮತ್ತು ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟುವ ಉದ್ದೇಶದಿಂದ ಸಕ್ಕರೆ ಅಂಶ ಸೇರಿಸುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ. ಈ ನಿಯಮಗಳು ಏಷ್ಯನ್, ಆಫ್ರಿಕನ್ ಮತ್ತು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಮಾತ್ರ ಉಲ್ಲಂಘನೆ ಆಗುತ್ತಿರುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ನೆಸ್ಲೆ ಇಂಡಿಯಾ ಲಿಮಿಟೆಡ್ ವಕ್ತಾರರು ಎನ್‌ಡಿಟಿವಿ ಪ್ರಾಫಿಟ್‌ಗೆ ಕಂಪನಿಯು ಕಳೆದ ಐದು ವರ್ಷಗಳಲ್ಲಿ ತನ್ನ ಶಿಶು ಧಾನ್ಯಗಳ ಪೋರ್ಟ್‌ಫೋಲಿಯೊದಲ್ಲಿ ಸೇರಿಸಲಾದ ಸಕ್ಕರೆಗಳ ಒಟ್ಟು ಪ್ರಮಾಣವನ್ನು ಶೇ.30ರಷ್ಟು ಕಡಿಮೆ ಮಾಡಿದೆ ಮತ್ತು ಅದನ್ನು ಕಡಿಮೆ ಮಾಡಲು ಉತ್ಪನ್ನಗಳನ್ನು “ಪರಿಶೀಲನೆ” ಮತ್ತು “ಸುಧಾರಣೆ” ಮಾಡುವುದನ್ನು ಮುಂದುವರೆಸಿದೆ.

“ಬಾಲ್ಯದಲ್ಲಿ ನಮ್ಮ ಉತ್ಪನ್ನಗಳ ಪೌಷ್ಟಿಕಾಂಶದ ಗುಣಮಟ್ಟವನ್ನು ನಾವು ನಂಬುತ್ತೇವೆ ಮತ್ತು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸಲು ಆದ್ಯತೆ ನೀಡುತ್ತೇವೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ, ಎಲ್ಲಾ 15 ಸೆರೆಲಾಕ್ ಬೇಬಿ ಉತ್ಪನ್ನಗಳು ಪ್ರತಿ ಸೇವೆಗೆ ಸರಾಸರಿ 3 ಗ್ರಾಂ ಸಕ್ಕರೆಯನ್ನು ಹೊಂದಿರುತ್ತವೆ ಎಂದು ಸಂಶೋಧನೆಗಳು ತೋರಿಸಿವೆ. ಅದೇ ಉತ್ಪನ್ನವನ್ನು ಜರ್ಮನಿ ಮತ್ತು ಯುಕೆಯಲ್ಲಿ ಸಕ್ಕರೆ ಸೇರಿಸದೆ ಮಾರಾಟ ಮಾಡಲಾಗುತ್ತಿದೆ, ಆದರೆ ಇಥಿಯೋಪಿಯಾ ಮತ್ತು ಥೈಲ್ಯಾಂಡ್‌ನಲ್ಲಿ ಇದು ಸುಮಾರು 6 ಗ್ರಾಂಗಳನ್ನು ಹೊಂದಿರುತ್ತದೆ ಎಂದು ಅಧ್ಯಯನ ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments