ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಾಮೀನು ಪಡೆಯುವ ಉದ್ದೇಶದಿಂದ ಸಕ್ಕರೆ ಕಾಯಿಲೆ ತೋರಿಸಿಕೊಳ್ಳಲು ಜೈಲಿನಲ್ಲಿ ಮಾವಿನ ಹಣ್ಣು ಸೇವಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಮದ್ಯ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಅರವಿಂದ್ ಕೇಜ್ರಿವಾಲ್ ಪದೇಪದೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಲಾಗುತ್ತಿದೆ. ಅನಾರೋಗ್ಯದ ನೆಪವೊಡ್ಡಿ ಜಾಮೀನು ಪಡೆಯಲು ಮಾವಿನ ಹಣ್ಣು, ಸ್ವೀಟ್ಸ್ ಮತ್ತು ಆಲೂ ಪೂರಿ ಸೇವಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಎರಡು ರೀತಿಯ ಸಕ್ಕರೆ ಕಾಯಿಲೆ ಹೊಂದಿರುವ ಕೇಜ್ರಿವಾಲ್ ಅನಾರೋಗ್ಯ ಬಿಂಬಿಸಿಕೊಂಡು ನ್ಯಾಯಾಲಯದ ಕನಿಕರದಿಂದ ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ.
ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿ ಸೇವಿಸುತ್ತಿರುವ ಆಹಾರದ ವಿವರ ನೀಡುವಂತೆ ನ್ಯಾಯಾಲಯ ಸೂಚಿಸಿದ ಹಿನ್ನೆಲೆಯಲ್ಲಿ ಇಡಿ ಆಹಾರದ ವಿವರಗಳ ವರದಿಯನ್ನು ನೀಡಿದೆ.