ಅಪ್ರಾಪ್ತೆ ಪತ್ನಿಯನ್ನು ಓಲೈಸಿ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದರೂ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದು. ಇದು ಸಂವಿಧಾನ ಬಾಹಿರ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ,
ಪತ್ನಿ ನೀಡಿದ್ದ ಅತ್ಯಾಚಾರ ದೂರು ಆಧರಿಸಿ ಪತಿಗೆ ನಾಗ್ಪುರ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದನ್ನು ಎತ್ತಿ ಹಿಡಿದ ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ.
ನ್ಯಾಯಮೂರ್ತಿ ಜಿಎ ಸಮಪ್ ಅವರನ್ನೊಳಗೊಂಡ ಏಕಸದಸ್ಯ ಪೀಠ, 18 ವರ್ಷದೊಳಗಿನ ಮಹಿಳೆ ಜೊತೆ ಯಾವುದೇ ರೀತಿಯಲ್ಲಿ ಲೈಂಗಿಕ ಸಂಪರ್ಕ ಬೆಳೆಸಿದರೂ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದು. ಆಕೆ ವಿವಾಹಿತೆ ಆಗಿರಲಿ ಅಥವಾ ಅವಿವಾಹಿತೆ ಆಗಿರಲಿ ಅದು ಸಂವಿಧಾನ ಬಾಹಿರ ಎಂದು ಸ್ಪಷ್ಟವಾಗಿ ತಿಳಿಸಿದೆ.
ಸಂವಿಧಾನದಲ್ಲಿ ಸ್ಪಷ್ಟವಾಗಿ ಮದುವೆ ವಯಸ್ಸು ಕನಿಷ್ಠ 18 ವರ್ಷ ಎಂದು ನಿಗದಿಪಡಿಸಿದೆ. ಇದರರ್ಥ ಮಹಿಳೆ ಜೊತೆ 18 ವರ್ಷಕ್ಕಿಂತ ಮುನ್ನ ಲೈಂಗಿಕ ಸಂಪರ್ಕ ನಡೆಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದೆ.
ಅಪ್ರಾಪ್ತೆ ಜೊತೆ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ ವ್ಯಕ್ತಿಯಿಂದ ಗರ್ಭ ಧರಿಸಿದ್ದಳು. ಈ ಕಾರಣಕ್ಕಾಗಿ ಆತ ಆಕೆಯನ್ನು ಮದುವೆ ಆಗಿದ್ದ. ಅಲ್ಲದೇ ಮದುವೆ ನಂತರವೂ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಎಂದು ಪ್ರಕರಣದಲ್ಲಿ ವಿವರಿಸಲಾಗಿದೆ.
ಮಹಾರಾಷ್ಟ್ರದ ವಾರ್ಧಾ ನಿವಾಸಿಯಾಗಿದ್ದ ಯುವತಿ ಕುಟುಂಬದ ಜೊತೆ ವಾಸವಾಗಿದ್ದು, 3-4 ವರ್ಷಗಳಿಂದ ಸಂಬಂಧ ಹೊಂದಿದ್ದಳು. ಆದರೆ ದೈಹಿಕ ಸಂಪರ್ಕಕ್ಕೆ ಒಪ್ಪಿಕೊಂಡಿರಲಿಲ್ಲ. ಆದರೆ ಆಕೆ ಕೆಲಸ ಮಾಡುವ ಕಡೆ ಹೋಗಿದ್ದ ಆರೋಪಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ವಿವರಿಸಲಾಗಿದೆ.