Saturday, November 16, 2024
Google search engine
Homeಬೆಂಗಳೂರುಬಿಬಿಎಂಪಿ ಇ-ಖಾತಾ ಕರಡು ಪಟ್ಟಿ ಪ್ರಕಟ: ನ.18ರಿಂದ ತಿದ್ದುಪಡಿಗೆ ಅವಕಾಶ

ಬಿಬಿಎಂಪಿ ಇ-ಖಾತಾ ಕರಡು ಪಟ್ಟಿ ಪ್ರಕಟ: ನ.18ರಿಂದ ತಿದ್ದುಪಡಿಗೆ ಅವಕಾಶ

ಆಸ್ತಿ ನೋಂದಾಣಿಗೆ ಇ-ಖಾತಾ ಕಡ್ಡಾಯಗೊಳಿಸಿದ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ 22ಲಕ್ಷ ಆಸ್ತಿಗಳ ಇ-ಖಾತಾ ಕರಡು ಪಟ್ಟಿ ಪ್ರಕಟಿಸಿದೆ.

ಬೆಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಇ-ಖಾತಾ ಕರಡು ಪಟ್ಟಿಯಲ್ಲಿ ಲೋಪಗಳ ತಿದ್ದುಪಡಿ ಮಾಡಿಕೊಳ್ಳಲು ಸೋಮವಾರದಿಂದ ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈಗಾಗಲೇ 22 ಲಕ್ಷ ಆಸ್ತಿಗಳ ಕರಡು ಇ-ಖಾತಾ ಪಟ್ಟಿ ಸಿದ್ಧಪಡಿಸಲಾಗಿದೆಯಾದರೂ ಕೆಲವೊಂದು ಪ್ರಕರಣಗಳಲ್ಲಿ ಹೆಸರು, ಆಸ್ತಿಗಳ ವಿಸ್ತಿರ್ಣ ಸೇರಿದಂತೆ ಸಣ್ಣಪುಟ್ಟ ದೋಷಗಳು ಕಂಡು ಬಂದಿವೆ. ಈ ದೋಷಗಳನ್ನು ಗ್ರಾಹಕರು ಸೋಮವಾರದ ನಂತರ ಸಂಬಂಧಪಟ್ಟ ವಲಯದ ಎಆರ್ ಓಗಳನ್ನು ಭೇಟಿ ಮಾಡಿ ಸರಿಪಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.

ವೆಬ್ ಸೈಟ್ ನಲ್ಲಿ ನೇರ ತಿದ್ದುಪಡಿಗೆ ಅವಕಾಶ

ಆಸ್ತಿ ಮಾಲೀಕರು ತಾವೇ ಖುದ್ದಗಿ ವೆಬ್ ಸೈಟ್ ಗೆ ಭೇಟಿ ನೀಡಿ ಇ-ಖಾತಾ ಲೋಪಗಳನ್ನು ಕೂಡ ಸರಿಪಡಿಸಿಕೊಳ್ಳಬಹುದಾಗಿದೆ.

ಇ-ಖಾತಾ ಪಡೆಯಲು ಮುಗಿಬಿದ್ದು ಗೊಂದಲ ಸೃಷ್ಟಿಸದೇ ಅಗತ್ಯವಿದ್ದವರು ಮಾತ್ರ ಅಂದರೆ ಲೋಷ-ದೋಷ ಇದ್ದವರು ಅಥವಾ ತಿದ್ದುಪಡಿ ಮಾಡಲು ಬಯಸುವವರು ಮಾತ್ರ ಇ-ಖಾತಾ ಪಡೆದುಕೊಳ್ಳಿ. ಇ-ಖಾತಾ ಪಡೆಯಲು ಯಾವುದೇ ಗಡುವು ವಿಧಿಸದ ಕಾರಣ ಯಾವಾಗ ಬೇಕಾದರೂ ಪಡೆಯಬಹುದು ಎಂದು ಅವರು ಸಲಹೆ ನೀಡಿದರು.

ಇ-ಖಾತಾ ಕರಡು ಸಿದ್ಧವಾಗುತ್ತಿದ್ದಂತೆಯೇ ಕೆಲವು ಅಧಿಕಾರಿಗಳು 1 ಲಕ್ಷ ರೂ.ವರೆಗೂ ಲಂಚ ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳಿ ಹೆಚ್ಚಿನ ಅಧಿಕಾರ ನೀಡದೇ ಬೆಂಗಳೂರು-1 ಅಥವಾ ಆಸ್ತಿ ಮಾಲೀಕರು ಸ್ವತಃ ತಾವೇ ಈ ಖಾತಾ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ 5 ಲಕ್ಷ ಆಸ್ತಿಗಳು ಯಾವುದೇ ಖಾತೆ ಹೊಂದಿಲ್ಲ. ಅಂತಹ ಆಸ್ತಿಗಳು ಮೊದಲಿಗೆ ಆಸ್ತಿ ತೆರಿಗೆ ಪಾವತಿಸಿ, ಆಸ್ತಿ ಗುರುತು ಸಂಖ್ಯೆ ಪಡೆಯಬೇಕು. ಬಳಿಕ ಅವರಿಗೆ ಇ-ಖಾತಾ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments