ಕನ್ನಡ ಕಿರುತೆರೆಯ ಅತ್ಯಂತ ರಿಯಾಲಿಟಿ ಶೋ ಬಿಗ್ ಬಾಸ್ 11ನೇ ಆವೃತ್ತಿ 50 ದಿನ ಪೂರೈಸಿದ ಬೆನ್ನಲ್ಲೇ ಬಿಗ್ ಟ್ವಿಸ್ಟ್ ನೀಡಲಾಗಿದೆ.
ಭಾನುವಾರ ಬಿಗ್ ಬಾಸ್ ಕನ್ನಡ 11ನೇ ಆವೃತ್ತಿ 50 ದಿನ ಪೂರೈಸಿತು. ಬರೋಬ್ಬರಿ 50ನೇ ದಿನವೇ ನಟಿ ಅನುಷಾ ಹೊರಬಿದ್ದಿದ್ದಾರೆ.
ಕಳೆದ ವಾರ ಯಾವುದೇ ಅಭ್ಯರ್ಥಿ ಎಲಿಮಿನೇಷನ್ ಮಾಡದೇ ಅಚ್ಚರಿ ಮೂಡಿಸಿದ್ದ ಬಿಗ್ ಬಾಸ್ ಈ ಬಾರಿ ಅನುಷಾ ಮನೆಯಿಂದ ಹೊರಬೀಳುತ್ತಿದ್ದಂತೆ ವೈಲ್ಡ್ ಕಾರ್ಡ್ ಮೂಲಕ ಇಬ್ಬರು ಪ್ರಬಲ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯುವ ಮೂಲಕ ಟ್ವಿಸ್ಟ್ ನೀಡಲಾಗಿದೆ.
ಕನ್ನಡ ಕಿರುತೆರೆಯ ನಟಿ ಹಾಗೂ ಬಿಗ್ ಬಾಸ್ ತೆಲುಗು ಕಾರ್ಯಕ್ರಮದಲ್ಲಿ ಕೊನೆಯ ವಾರದವರೆಗೆ ತಲುಪಿದ್ದ ಶೋಭಾ ಶೆಟ್ಟಿ ಹಾಗೂ ರಜತ್ ಶೆಟ್ಟಿ 51ನೇ ದಿನ ಬೆಳಿಗ್ಗೆ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಲಿದ್ದಾರೆ.
ರಜತ್ ಶೆಟ್ಟಿ ಸೂಪರ್ ಜೋಡಿ ಮತ್ತು ರಾಜ ರಾಣಿ ಸೇರಿದಂತೆ 5 ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದು, 2ರಲ್ಲಿ ಫೈನಲ್ ವರೆಗೂ ತಲುಪಿದ್ದಾರೆ.
ಶೋಭಾ ಶೆಟ್ಟಿ ಬಿಗ್ ಬಾಸ್ ತೆಲುಗು ಶೋನಲ್ಲಿ ವಾಗ್ವಾದಗಳಿಂದ ಹೆಸರು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಮ್ಸ್ ಗೆ ಆಹಾರವಾಗುವ ಮೂಲಕ ಹೆಚ್ಚು ಜನಪ್ರಿಯರಾಗಿದ್ದರು.