Saturday, October 5, 2024
Google search engine
Homeತಾಜಾ ಸುದ್ದಿಸಂಸತ್ ನಲ್ಲಿ ರಾಜ್ಯದ ಸಂಸದರ ಸಾಧನೆ ಕಳಪೆ: 3 ಸಂಸದರು ಚಕಾರವೇ ಎತ್ತಿಲ್ಲ!

ಸಂಸತ್ ನಲ್ಲಿ ರಾಜ್ಯದ ಸಂಸದರ ಸಾಧನೆ ಕಳಪೆ: 3 ಸಂಸದರು ಚಕಾರವೇ ಎತ್ತಿಲ್ಲ!

ಕಳೆದ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ರಾಜ್ಯದ 28 ಸಂಸದರಲ್ಲಿ ಬಹುತೇಕ ಸಂಸದರ ಕಾರ್ಯ ಸಾಧನೆ ಕಳಪೆಯಾಗಿದ್ದು, ಶೇ.71ರಷ್ಟು ಸಂಸದರು ಹಾಜರಾತಿ ಹೊಂದಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ಮುಕ್ತಾಯಗೊಂಡಿದ್ದು, ಎರಡನೇ ಹಂತದ ಮತದಾನ ಕರ್ನಾಟಕದ ದಕ್ಷಿಣ ಭಾಗದಲ್ಲಿ ನಡೆಯಲಿದೆ.  ಈ ಹಿನ್ನೆಲೆಯಲ್ಲಿ ಕರ್ನಾಟಕದ ಸಂಸದರು ಸಂಸತ್ ನಲ್ಲಿ ಕಾರ್ಯವೈಖರಿಯ ಸಮೀಕ್ಷೆ ವರದಿ ಬಿಡುಗಡೆ ಮಾಡಲಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳ ಪೈಕಿ 25 ಸಂಸದರು ಬಿಜೆಪಿಯವರಾಗಿದ್ದರೆ, ತಲಾ ಒಬ್ಬ ಸಂಸದರು ಕಾಂಗ್ರೆಸ್ ಮತ್ತು ಜೆಡಿಎಸ್ ನವರಾಗಿದ್ದರು. ಆಡಳಿತಾರೂಢ ಬಿಜೆಪಿ ಈ ಬಾರಿ ಹಲವು ಸಂಸದರಿಗೆ ಕಳಪೆ ಸಾಧನೆ ಹಿನ್ನೆಲೆಯಲ್ಲಿ ಟಿಕೆಟ್ ಕೊಡಲು ನಿರಾಕರಿಸಿ ಹೊಸಬರಿಗೆ ಅವಕಾಶ ನೀಡಿದೆ.

ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಬರಗಾಲ, ಪ್ರವಾಹ, ಮಹದಾಯಿ ಯೋಜನೆ, ಕಾವೇರಿ ವಿವಾದ ಸೇರಿದಂತೆ ಹಲವು ವಿಷಯಗಳು ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗಿತ್ತು. ಆದರೆ ಈ ಬಗ್ಗೆ ರಾಜ್ಯದ ಸಂಸದರೇ ಪ್ರಸ್ತಾಪ ಮಾಡದೇ ಚರ್ಚೆಯನ್ನೇ ಮಾಡಿಲ್ಲ. ಕೋವಿಡ್ ಮತ್ತು ಕಾವೇರಿ ವಿವಾದ ಬಗ್ಗೆ ಸುಮಲತಾ ಅಂಬರೀಷ್ ಮತ್ತು ಡಿಕೆ ಸುರೇಶ್ ಮಾತ್ರ ಪ್ರಸ್ತಾಪ ಮಾಡಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸಂಸತ್ತಿನಲ್ಲಿ ಹಾಜರಾತಿ, ಕೇಳಿದ ಪ್ರಶ್ನೆಗಳು, ಪ್ರಮುಖ ಚರ್ಚೆಗಳಲ್ಲಿ ಭಾಗವಹಿಸುವಿಕೆ ಮತ್ತು ಅವರ ಕ್ಷೇತ್ರಗಳಲ್ಲಿನ ಕಾರ್ಯಕ್ಷಮತೆಯನ್ನು ಸಮೀಕ್ಷೆ ಪರಿಗಣಿಸಿದೆ. ಎಲ್ಲ ಸಂಸದರ ಸರಾಸರಿ ಹಾಜರಾತಿ ಶೇ.71ರಷ್ಟಿತ್ತು.

ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉತ್ತರ ಸಂಸದ ಸದಾನಂದಗೌಡ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಮತ್ತು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಸದನದಲ್ಲಿ ಪ್ರಶ್ನೆಯನ್ನೇ ಎತ್ತಿಲ್ಲ. ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದ್ದು ಬಿಟ್ಟರೆ ಅನಂತಕುಮಾರ್ ಹೆಗಡೆ (ಉತ್ತರ ಕನ್ನಡ ಸಂಸದ), ಡಿ.ವಿ.ಸದಾನಂದಗೌಡ, ಜೋಶಿ, ರಮೇಶ್ ಜಿಗಜಿಣಗಿ (ವಿಜಯಪುರ), ಶ್ರೀನಿವಾಸ ಪ್ರಸಾದ್ (ಚಾಮರಾಜನಗರ) ಮತ್ತು ಬಿಎನ್ ಬಚ್ಚೇಗೌಡ (ಚಿಕ್ಕಬಳ್ಳಾಪುರ) ಚರ್ಚೆಯಲ್ಲಿ ಭಾಗವಹಿಸಲಿಲ್ಲ ಎಂದು ವಿಶ್ಲೇಷಣೆ ಹೇಳಿದೆ.

ಮಂಗಳಾ ಅಂಗಡಿ (ಬೆಳಗಾವಿ) ಒಂದು ಚರ್ಚೆಯಲ್ಲಿ ಭಾಗವಹಿಸಿ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ವಿಮಾನ ಒದಗಿಸುವಂತೆ ಕೋರಿದ್ದರು.

ಸಾಮಾಜಿಕ ವಿಜ್ಞಾನಿಗಳಾದ ಎಆರ್ ವಾಸವಿ ಮತ್ತು ಜಾನಕಿ ನಾಯರ್ ಅವರು ಈ ವಿಶ್ಲೇಷಣೆ ನಡೆಸಿದ್ದು, ಶುಕ್ರವಾರ ನಾಗರಿಕ ಸಮಾಜ ತಂಡ ಸಂವಿಧಾನದ ಹಾದಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಬಿಡುಗಡೆಗೊಳಿಸಲಾಯಿತು.

11 ಸಂಸದರು ನಿಧಿಯನ್ನು ನಿರ್ದೇಶಿಸುವ ಮೂಲಕ ಅಥವಾ ಸಭೆಗಳಿಗೆ ಹಾಜರಾಗುವ ಮೂಲಕ ಸೀಮಿತ ಕೆಲಸ ಮಾಡಿದ್ದಾರೆ. 15 ಮಂದಿ ಸಂಸದರು ‘ನಿರಾಸಕ್ತರು’ ಎಂದು ಪರಿಗಣಿಸಲಾಗಿದೆ. ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ) ಮತ್ತು ಶ್ರೀನಿವಾಸ ಪ್ರಸಾದ್ ನೆಗೆಟಿವ್ ರೋಲ್ ನಿರ್ವಹಿಸಿದ್ದಾರೆ ಎಂದು ಅವರ ವಿಶ್ಲೇಷಣೆ ತಿಳಿಸಿದೆ.

ರಾಜ್ಯಕ್ಕೆ ಜಿಎಸ್‌ಟಿ ಕೊಡುಗೆಗಳು ಮತ್ತು ತೆರಿಗೆ ಹಂಚಿಕೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸುರೇಶ್ ಮತ್ತು ರಾಜ್ಯದಲ್ಲಿ ಜನೌಷಧಿ ಕೇಂದ್ರಗಳನ್ನು ಉತ್ತೇಜಿಸಲು ಸದಾನಂದ ಗೌಡ ಮಾತ್ರ ಕರ್ನಾಟಕದ ನೀತಿಗಳು ಮತ್ತು ಕಾರ್ಯಕ್ರಮಗಳ ಪರ ಮಾತನಾಡಿದ್ದಾರೆ ಎಂದು ಪರಿಗಣಿಸಲಾಗಿದೆ ಎಂದು ವಾಸವಿ ಮತ್ತು ಜಾನಕಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments