ಐಪಿಎಲ್ ಹರಾಜು ಪ್ರಕ್ರಿಯೆಯ ಮೊದಲ ದಿನ 53 ಆಟಗಾರರು ವಿವಿಧ ಫ್ರಾಂಚೈಸಿಗಳ ಗಮನ ಸೆಳೆಯಲು ಯಶಸ್ವಿಯಾದರೆ, 6 ಆಟಗಾರರು ಖರೀದಿಸುವವರೇ ಇಲ್ಲದೇ ಅನ್ ಸೋಲ್ಡ್ ಆಟಗಾರರ ಪಟ್ಟಿ ಸೇರಿದ್ದಾರೆ.
ಅಬುಧಾಬಿಯಲ್ಲಿ ಭಾನುವಾರ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ದೇವದತ್ ಪಡಿಕ್ಕಲ್, ಡೇವಿಡ್ ವಾರ್ನರ್, ಜಾನಿ ಬೇರ್ ಸ್ಟೊ, ವಾಕರ್ ಸಲಮ್ ಕೈಲ್, ಅನ್ಮೋಲ್ ಪ್ರೀತ್ ಸಿಂಗ್, ಯಶ್ ಡಲ್ ಮಾರಾಟವಾಗದೇ ನಿರಾಸೆ ಅನುಭವಿಸಿದರು.
ಐಪಿಎಲ್ ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಹಲವು ದಾಖಲೆ ಬರೆದಿದ್ದ ಡೇವಿಡ್ ವಾರ್ನರ್ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರೂ ಆಗಿದ್ದವರು. ಮೂಲಧನ 2 ಕೋಟಿ ರೂ. ನಿಗದಿಯಾಗಿದ್ದು, ಅವರನ್ನು ಯಾವುದೇ ತಂಡ ಖರೀದಿಸಲು ಆಸಕ್ತಿ ತೋರಲಿಲ್ಲ.
ಆರ್ ಸಿಬಿ ಮೂಲಕ ಐಪಿಎಲ್ ಗೆ ಪಾದರ್ಪಣೆ ಮಾಡಿದ್ದ ಕರ್ನಾಟಕದ ಯುವ ಬ್ಯಾಟ್ಸ್ ಮನ್ ದೇವದತ್ ಪಡಿಕ್ಕಲ್ ಕಳೆದ ಬಾರಿ ನಿರಾಶಾದಾಯಕ ಪ್ರದರ್ಶನ ನೀಡಿದ್ದರಿಂದ ಮಾರಾಟವಾಗಲಿಲ್ಲ. ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಜಾನಿ ಬೇರ್ ಸ್ಟೋ ಸ್ಫೋಟಕ ಬ್ಯಾಟ್ಸ್ ಮನ್ ಕೂಡ ಸೇಲಾಗ ಪ್ರಮುಖ ಆಟಗಾರರಾಗಿದ್ದಾರೆ.
ಮುಂಬೈ ಇಂಡಿಯನ್ಸ್ ಕೇವಲ ಒಬ್ಬ ಆಟಗಾರನನ್ನು ಮಾತ್ರ ಖರೀದಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ವರು ಆಟಗಾರರನ್ನು ಮಾತ್ರ ಖರೀದಿಸಿದ್ದಾರೆ. ಮೊದಲ ದಿನದ 53 ಆಟಗಾರರು ಮಾರಾಟವಾಗಿದ್ದರೂ ಬಹುತೇಕ ಆಟಗಾರರ ಖರೀದಿಗೆ ಲಕ್ನೋ ಸೂಪರ್ ಜೈಂಟ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹೆಚ್ಚು ಆಸಕ್ತಿ ವಹಿಸಿದ್ದವು.