ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆಯಾದ ಮಾರನೇ ದಿನವೇ ಹಿಜಾಬುಲ್ಲಾ ಮೇಲೆ ದಾಳಿ ನಡೆಸಿದ ಇಸ್ರೇಲ್ ಮೂಲಸೌಕರ್ಯಗಳಿಗೆ ಹಾನಿ ಮಾಡಿದೆ.
ಇರಾನ್ ಬೆಂಬಲಿತ ಹೆಜಾಬುಲ್ಲಾ ಆಶ್ರಯ ಪಡೆದಿರುವ ದಕ್ಷಿಣ ಲೆಬೆನಾನ್ ಕೇಂದ್ರೀಕರಿಸಿ ಮಧ್ಯಂತರ ಸಾಮರ್ಥ್ಯದ ಕ್ಷಿಪಣಗಳನ್ನು ಬಳಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.
ಕಳೆದ ಕೆಲವು ತಿಂಗಳಿಂದ ನಡೆಯುತ್ತಿರುವ ಹೆಜಾಬುಲ್ಲಾ ಮತ್ತು ಇಸ್ರೇಲ್ ನಡುವಣ ಯುದ್ಧ ವಿಕೋಪಕ್ಕೆ ತಿರುಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ 60 ದಿನಗಳ ಕಾಲ ಕದನ ವಿರಾಮವನ್ನು ಘೋಷಿಸಲಾಗಿತ್ತು.
ದಕ್ಷಿಣ ಲೆಬೆನಾನ್ ನಲ್ಲಿ ಅಲ್ಪದೂರದ ಕ್ಷಿಪಣಿಗಳ ಸಿದ್ಧತೆ ನಡೆಸುತ್ತಿದ್ದು, ಇದು ದಾಳಿಯ ಮುನ್ಸೂಚನೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಿ ಮೂಲಸೌಕರ್ಯಗಳಿಗೆ ಹಾನಿ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.