16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸಿ ಆಸ್ಟ್ರೇಲಿಯಾ ಸಂಸತ್ ಮಸೂದೆ ಅಂಗೀಕರಿಸುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.
ಜಗತ್ತಿನ ಅತ್ಯಂತ ಜನಪ್ರಿಯ ಜಾಲತಾಣಗಳಾದ ಫೇಸ್ ಬುಕ್, ಇನ್ ಸ್ಟಾಗ್ರಾಂ ಮತ್ತು ಎಕ್ಸ್ ಗಳನ್ನು ಇನ್ನು ಮುಂದೆ ಆಸ್ಟ್ರೇಲಿಯಾದ ಅಪ್ರಾಪ್ತರು ಬಳಸುವಂತಿಲ್ಲ.
ಸಾಮಾಜಿಕ ಜಾಲತಾಣ ಬಳಕೆಯಿಂದ ಮಕ್ಕಳ ಆರೋಗ್ಯ ಮತ್ತು ಮನಸ್ಸು ಮತ್ತು ಬುದ್ದಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ತಜ್ಞರು ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಯಾವುದೇ ದೇಶಗಳು ಗಮನ ನೀಡದೇ ಇರುವ ಈ ಸನ್ನಿವೇಶದಲ್ಲಿ ಆಸ್ಟ್ರೇಲಿಯಾದ ಜನಪ್ರತಿನಿಧಿಗಳು ಕೈಗೊಂಡ ತೀರ್ಮಾನ ಅತ್ಯಂತ ಮಹತ್ವದ್ದಾಗಿದೆ.
ಮುಂದಿನ ದಿನಗಳಲ್ಲಿ ಮಕ್ಕಳು ಸಾಮಾಜಿಕ ಜಾಲತಾಣ ಬಳಕೆ ನಿಯಂತ್ರಿಸುವ ಕುರಿತು ಸೂಕ್ತ ಕ್ರಮಗಳನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಿವೆ.
ಸಾಮಾಜಿಕ ಜಾಲತಾಣ ಬಳಕೆ ಮಾಡದಂತೆ ಇರುವುದು ಅತ್ಯಂತ ಕಠಿಣ. ಸರ್ಕಾರ ನಿಷೇಧಿಸಿದ್ದರೂ ನಾವು ಅದನ್ನು ನೋಡಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ ಎಂದು 12 ವರ್ಷದ ಬಾಲಕ ಆಂಗುಸ್ ಲೈಡಮ್ ಹೇಳಿದ್ದಾನೆ.
ಬಾಲಕರು ಹೇಗಾದರೂ ಮಾಡಿ ಸಾಮಾಜಿಕ ಜಾಲತಾಣದ ನಂಟು ಮುಂದುವರಿಸಲು ಪ್ರಯತ್ನಿಸಲಿದ್ದು, ಇದನ್ನು ತಡೆಗಟ್ಟುವುದು ಆಸ್ಟ್ರೇಲಿಯಾ ಸರ್ಕಾರಕ್ಕೆ ದೊಡ್ಡ ಸವಾಲಿನ ವಿಷಯವಾಗಿದೆ.