Home ದೇಶ ಅದಾನಿ ಬಂಧನಕ್ಕೆ ಅಮೆರಿಕದಿಂದ ಮನವಿ ಬಂದಿಲ್ಲ: ಕೇಂದ್ರ ಸರ್ಕಾರ

ಅದಾನಿ ಬಂಧನಕ್ಕೆ ಅಮೆರಿಕದಿಂದ ಮನವಿ ಬಂದಿಲ್ಲ: ಕೇಂದ್ರ ಸರ್ಕಾರ

ಭಾರತದ ಅಧಿಕಾರಿಗೆ ಲಂಚ ನೀಡುವ ಪ್ರಕರಣದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಬಂಧನ ಆದೇಶ ಕುರಿತು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಬಹಿರಂಗ ಹೇಳಿಕೆ ನೀಡಿದೆ.

by Editor
0 comments
Gautam Adani

ಭಾರತದ ಅಧಿಕಾರಿಗೆ ಲಂಚ ನೀಡುವ ಪ್ರಕರಣದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಬಂಧನ ಆದೇಶ ಕುರಿತು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಬಹಿರಂಗ ಹೇಳಿಕೆ ನೀಡಿದೆ.

ಗೌತಮ್ ಅದಾನಿ ಬಂಧನ ಕುರಿತು ಅಮೆರಿಕದಿಂದ ಇದುವರೆಗೆ ಯಾವುದೇ ಮನವಿ ಅಥವಾ ಪ್ರಸ್ತಾಪ ಬಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಕೇಂದ್ರ ವಿದೇಶಾಂಗ ಸಚಿವಾಲಯ ಶುಕ್ರವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಕೈಗಾರಿಕೋದ್ಯಮಿಗಳ ವಿರುದ್ಧ ವಿದೇಶಗಳಲ್ಲಿ ನಡೆಯುವ ಕಾನೂನು ಹೋರಾಟಗಳಿಗೆ ಕೇಂದ್ರ ಸರ್ಕಾರ ಯಾವುದೇ ಪಾತ್ರ ವಹಿಸುವುದಿಲ್ಲ ಎಂದು ಹೇಳಿದೆ.

ಗೌತಮ್ ಅದಾನಿ ವಿರುದ್ಧದ ಪ್ರಕರಣದಲ್ಲಿ ಕೈಗಾರಿಕೆ, ವೈಯಕ್ತಿಕ ಮತ್ತು ಸಂಬಂಧಪಟ್ಟ ಸರ್ಕಾರದ್ದಾಗಿದ್ದೆ. ಇದರಲ್ಲಿ ಭಾರತದ ಪಾತ್ರ ಯಾವುದೂ ಇಲ್ಲ. ಅಮೆರಿಕದಿಂದ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದ ಕುರಿತು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

banner

ಭಾರತದೊಳಗೆ ಗಡಿಪಾರು ಸೇರಿದಂತೆ ಯಾವುದೇ  ಕಾನೂನು ಹೋರಾಟ ಇದ್ದರೆ ಅದಕ್ಕೆ ಸರ್ಕಾರ ತಕ್ಷಣವೇ ಸ್ಪಂದಿಸಲಿದೆ. ಆದರೆ ಇದು ಭಾರತದ ಹೊರಗೆ ಆಗಿರುವ ಘಟನೆ. ಸಂಬಂಧಪಟ್ಟ ದೇಶದ ಅಧಿಕಾರಿಗಳಿಂದ ಮಾಹಿತಿ ಅಥವಾ ಮನವಿ ಬಾರದೇ ನಾವು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಮೈತ್ರಿ ಮೀಟಿಂಗ್ ರದ್ದು: ಕೊನೆ ಕಾಣದ ಮಹಾ `ಸಿಎಂ’ ಬಿಕ್ಕಟ್ಟು! ಸಂಭಲ್ ಮಸೀದಿ ಸರ್ವೇಗೆ ಸುಪ್ರೀಂ ತಡೆ: ಉತ್ತರ ಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ಪಶ್ಚಿಮ ಬಂಗಾಳ: ಉಪ ಚುನಾವಣೆಯಲ್ಲೂ ಸೋತ ಬಿಜೆಪಿಯಲ್ಲಿ ತಾರಕಕ್ಕೇರಿದ ಭಿನ್ನಮತ Fengal Cyclone ನಾಳೆ ಮಧ್ಯಾಹ್ನ ಫೆಂಗಲ್ ಚಂಡಮಾರುತ ತಮಿಳುನಾಡು ಪ್ರವೇಶ! Law News ಸಂಬಂಧ ಮುರಿದರೆ ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಚಂದ್ರಶೇಖರ್ ಸ್ವಾಮೀಜಿಗೆ ಸಂಕಷ್ಟ: ಡಿ.2ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ! ಒಕ್ಕಲಿಗ ಸ್ವಾಮೀಜಿ ಮುಟ್ಟಿದರೆ ಸಮುದಾಯ ತಿರುಗಿ ಬೀಳಲಿದೆ: ಆರ್.ಅಶೋಕ ಎಚ್ಚರಿಕೆ ಅದಾನಿ ಬಂಧನಕ್ಕೆ ಅಮೆರಿಕದಿಂದ ಮನವಿ ಬಂದಿಲ್ಲ: ಕೇಂದ್ರ ಸರ್ಕಾರ Belagavi ಲವ್ ಸೆಕ್ಸ್ ಧೋಖಾ: ಮಹಿಳಾ ಹೋರಾಟಗಾರ್ತಿಗೆ ವಂಚಿಸಿದ ಯೋಧ! Karnataka ಪ್ರಧಾನಿ ಮುಂದೆ 5 ಪ್ರಮುಖ ಬೇಡಿಕೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ!